Urdu   /   English   /   Nawayathi

ಅನ್ಯರಾಜ್ಯಗಳಿಂದ ಗೋವಾ ರಾಜ್ಯಕ್ಕೆ ಮೀನು ಸಾಗಣೆ ನಡೆಸಲು ದೊರಕಿದ ಅನುಮತಿ

share with us

ಕಾರವಾರ: 18 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಈ ಹಿಂದೆ ಗೋವಾ ರಾಜ್ಯಕ್ಕೆ ಅನ್ಯ ರಾಜ್ಯಗಳಿಂದ ಮೀನು ಸಾಗಣೆ ನಿರ್ಬಂಧಿಸಲಾಗಿತ್ತು. ಈಗ ಅನ್ಯ ರಾಜ್ಯಗಳಿಂದ ಮೀನು ಸಾಗಣೆ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಕೌಶಲ್ಯಾಭಿವೃದ್ಧಿಯ ಸಚಿವರಾದ ದೇಶಪಾಂಡೆ ಅವರು ಹೇಳಿದ್ದಾರೆ. ಈ ಹಿಂದೆ ಗೋವಾ ಸರ್ಕಾರದಿಂದ ಮೀನಿನಲ್ಲಿ ಫಾರ್ಮಾಲಿನ್ ಅಂಶ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಅನ್ಯ ರಾಜ್ಯಗಳ ಮೀನು ಸಾಗಣೆಗೆ ನಿರ್ಬಂಧನೆ ಹಾಕಲಾಗಿತ್ತು. ಈ ವಿಷಯ ಕುರಿತು ಆರ್,ವಿ ದೇಶಪಾಂಡೆ ಅವರು ಗೋವಾ ರಾಜ್ಯದ ಆರೋಗ್ಯ ಸಚಿವರಾದ ವಿಶ್ವಜಿತ್ ಠಾಣೆ ಅವರ ಜೊತೆಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿ ಅನುಮತಿಯನ್ನು ಪಡೆದಿದ್ದಾರೆ. ನಾಲ್ಕು ಚಕ್ರದ ಲಘು ವಾಹನಗಳು ಯಾವುದೇ ತಡೆಗಳಿಲ್ಲದೇ ಸಾಗಣೆ ಮಾಡಬಹುದು. ಆದರೆ ಭಾರೀ ವಾಹನಗಳು ಅಂದರೆ ಟ್ರಕ್ ಸೇರಿದಂತೆ ಇತರ ವಾಹನಗಳು ಸಾಗಣೆ ನಡೆಸಲು ಎಫ್,ಡಿ,ಎ ಅವರ ಅನುಮತಿ ಅಥವಾ ಅವರ ಪ್ರಮಾಣ ಪತ್ರ ಕಡ್ಡಾಯ ಎಂದು ಷರತ್ತು ಹಾಕಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا