Urdu   /   English   /   Nawayathi

ಬೆಂಗಳೂರು: ಇದೇ ಮೊದಲ ಬಾರಿಗೆ ಬ್ಲೆಂಡೆಡ್ ಬಯೋ-ಜೆಟ್ ಇಂಧನದಿಂದ ಸೇನಾ ವಿಮಾನ ಹಾರಾಟ

share with us

ಬೆಂಗಳೂರು: 18 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆ ಡಿ.18 ರಂದು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಿದೆ. ಬೆಂಗಳೂರಿನಲ್ಲಿ ಈ ಪ್ರಯೋಗ ನಡೆದಿದ್ದು, ಐಎಎಫ್ ಹಾಗೂ ಡಿಆರ್ ಡಿಒ, ಡಿಜಿಎಕ್ಯೂಎ ಹಾಗೂ ಸಿಎಸ್ಐಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್ ನ ಸಹಯೋಗದಲ್ಲಿ ಈ ಪ್ರಯೋಗ ನಡೆಸಲಾಗಿದೆ. ಜು.27 ರಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ವಾಯುಪಡೆ ಮುಖ್ಯಸ್ಥ ಬಿಎಸ್ ಧನೊವಾ ಅವರು ಬ್ಲಂಡೆಡ್ ಬಯೋ ಜೆಟ್ ಇಂಧನ ಬಳಕೆ ಮಾಡಿ ವಿಮಾನ ಹಾರಾಟ ನಡೆಸುವ ಪ್ರಯೋಗದ ಕುರಿತು ಘೋಷಣೆ ಮಾಡಿದ್ದರು.  ಅದರಂತೆಯೇ ಈಗ ಎಎನ್-32 ಟ್ರಾನ್ಸ್ ಪೋರ್ಟರ್ ಏರ್ ಕ್ರಾಫ್ಟ್ ನ್ನು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಲಾಗಿದೆ.

ಬ್ಲಂಡೆಡ್ ಬಯೋ-ಜೆಟ್ ಇಂಧನದಲ್ಲಿ ಶೇ.10 ರಷ್ಟು ಬಯೋ-ಜೆಟ್ ಇಂಧನ ಬಳಕೆ ಮಾಡಲಾಗುತ್ತದೆ.  ಛತ್ತೀಸ್ ಗಢ ಬಯೋ ಡಿಸೆಲ್ ಅಭಿವೃದ್ಧಿ ಪ್ರಾಧಿಕಾರ (ಸಿಬಿಡಿಎ)ದಿಂದ ಪೂರೈಕೆಯಾಗುವ ಜಟ್ರೊಫಾ ತೈಲದಿಂದ ಬ್ಲಂಡೆಡ್ ಬಯೋ ಜೆಟ್ ಇಂಧನವನ್ನು ತಯಾರಿಸಲಾಗುತ್ತದೆ. 2018 ರ ಆಗಸ್ಟ್ ತಿಂಗಳಲ್ಲಿ ದೇಶದ ಮೊದಲ ವಾಣಿಜ್ಯ ವಿಮಾನ ಸ್ಪೈಸ್ ಜೆಟ್ ಸಂಸ್ಥೆ ಬಯೋ ಜೆಟ್ ಇಂಧನವನ್ನು ಬಳಸಿ ಡೆಹ್ರಾಡೂನ್-ದೆಹಲಿ ನಡುವೆ ವಿಮಾನ ಹಾರಾಟ ನಡೆಸಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا