Urdu   /   English   /   Nawayathi

ಹತ್ತು ಕೋಟಿ ವರ್ಷಗಳಲ್ಲಿ ಮಾಯವಾಗುತ್ತೆ ಶನಿಯ ಉಂಗುರ

share with us

ವಾಷಿಂಗ್ಟನ್‌: ಉಂಗುರಗಳ ಕಾರಣದಿಂದಲೇ ಬೇರೆಲ್ಲ ಗ್ರಹಗಳಿಗಿಂತ ಆಕರ್ಷಕವಾಗಿ ಕಾಣುವ ಶನಿಯು, ಈಗ ತನ್ನ ಈ ಅಂದವನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಅಂದರೆ, ಶನಿಯ ಉಂಗುರಗಳು ವೇಗವಾಗಿ ತೆಳುವಾಗುತ್ತಿದ್ದು, ಇದೇ ವೇಗದಲ್ಲಿ ಸಾಗಿದರೆ, ಮುಂದಿನ ಹತ್ತು ಕೋಟಿ ವರ್ಷಗಳಲ್ಲಿ ಇವು ಸಂಪೂರ್ಣವಾಗಿ ಮಾಯವಾಗಲಿವೆ ಎಂದು ನಾಸಾ ಹೇಳಿದೆ. ‘ಹಿಮಕಣಗಳಿಂದ ಕೂಡಿರುವ ಈ ಗ್ರಹವು, ತನ್ನ ಗುರುತ್ವ ಬಲದ ಪ್ರಭಾವಕ್ಕೆ ಒಳಗಾಗಿ ದೂಳಿನ ಮಳೆಯನ್ನು ಸುರಿಸುತ್ತಿದೆ. ಈ ಮಳೆಯ ನೀರು ಶನಿಯ ಉಂಗುರಗಳಲ್ಲಿ ಸಂಗ್ರಹವಾಗುತ್ತಿದೆ. ಅರ್ಧ ತಾಸಿನಲ್ಲಿ ಒಲಿಂಪಿಕ್‌ ಗಾತ್ರದ ಈಜುಕೊಳವನ್ನು ಭರ್ತಿ ಮಾಡುವಷ್ಟು ನೀರು ಇಲ್ಲಿ ಸೇರುತ್ತಿದೆ’ ನಾಸಾದ ಗೊಡ್ಡಾರ್ಡ್‌ ಬಾಹ್ಯಾಕಾಶ ಕೇಂದ್ರದ ಜೇಮ್ಸ್‌ ಡೊನೊ ಹೇಳುತ್ತಾರೆ.

ಶನಿ ಗ್ರಹವು ಉಂಗುರಗಳೊಂದಿಗೆಯೇ ರಚನೆಯಾಗಿದೆಯೇ ಅಥವಾ ಕಾಲಾನಂತರದಲ್ಲಿ ಈ ಉಂಗುರಗಳ ಅಂದವನ್ನು ಶನಿ ಪಡೆದುಕೊಂಡಿದೆಯೇ ಎಂಬ ಬಗ್ಗೆ ಉತ್ತರಿಸಿರುವ ವಿಜ್ಞಾನಿಗಳು, ಈ ಉಂಗುರಗಳ ಸದ್ಯ ಹತ್ತು ಕೋಟಿ ವರ್ಷ ವಯಸ್ಸಿನವುಗಳಾಗಿರುವುದರಿಂದ, ಕಾಲಾನಂತರದಲ್ಲಿಯೇ ಇವು ರಚನೆಗೊಂಡಿವೆ. ಏಕೆಂದರೆ, ಶನಿಯ ವಯಸ್ಸು ಸದ್ಯ 400 ಕೋಟಿ ವರ್ಷಗಳಾಗಿವೆ ಎಂದು ಅವರು ಹೇಳುತ್ತಾರೆ. ‘ಶನಿಯ ಜೀವಿತದ ನಡುವಯಸ್ಸಿನಲ್ಲಿ ಈ ಉಂಗುರಗಳು ಕಾಣಿಸಿಕೊಂಡಿವೆ. ಈ ಉಂಗುರಗಳು ದಪ್ಪ ಇರುವುದರಿಂದ ನಮಗೆ ಗೋಚರಿಸುತ್ತಿವೆ. ಸದ್ಯ, ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಅವು ತೆಳುವಾಗುತ್ತಾ ಹೋದರೆ ಕಣ್ಮರೆಯಾಗಲಿವೆ. ಗುರು, ಯುರೇನಸ್‌ ಮತ್ತು ನೆಪ್ಚೂನ್‌ನಲ್ಲಿಯೂ ಉಂಗುರಗಳು ಇದ್ದರೂ, ಅವು ತೀರಾ ತೆಳುವಾಗಿರುವುದರಿಂದ ಅವುಗಳ ಕಣ್ಮರೆ ಅಷ್ಟು ಗಮನ ಸೆಳೆಯಲಾರದು’ ಎಂದು ಜೇಮ್ಸ್‌ ಹೇಳುತ್ತಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا