Urdu   /   English   /   Nawayathi

ಅಮೆರಿಕಾ ಒಳಾಡಳಿತ ಕಾರ್ಯದರ್ಶಿ ರಿಯಾನ್ ಝಿಂಕೆ ರಾಜೀನಾಮೆಗೆ ಟ್ರಂಪ್ ಆದೇಶ

share with us

ವಾಷಿಂಗ್ಟನ್ : 16 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕಾದ ಹಾಲಿ ಒಳಾಡಳಿತ ಕಾರ್ಯದರ್ಶಿ ರಿಯಾನ್ ಝಿಂಕೆ  ಈ ವರ್ಷದ ಅಂತ್ಯದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.  ಮುಂದಿನ ವಾರ ಅಮೆರಿಕಾದ ನೂತನ ಒಳಾಡಳಿತ ಕಾರ್ಯದರ್ಶಿಯನ್ನು ಘೋಷಣೆ ಮಾಡಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಿಯಾನ್ ಝಿಂಕೆ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎರಡು ವರ್ಷಗಳಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಅವರನ್ನು ಅಭಿನಂದಿಸುವುದಾಗಿ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ರಿಯಾನ್ ಝಿಂಕೆ ಅವರ ನೀತಿ ನಿರ್ಣಯಗಳು ಹಾಗೂ ಪ್ರವಾಸ, ವ್ಯವಹಾರ ಒಪ್ಪಂದಗಳಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂಬ ವಂದಂತಿಗಳ ಬೆನ್ನಲ್ಲೇ  ಝಿಂಕೆ ಅವರ ರಾಜೀನಾಮೆ ಪಡೆಯಲಾಗುತ್ತಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ರಾಷ್ಟ್ರಾಧ್ಯಕ್ಷರಿಗಾಗಿ ಸೇವೆ ಮಾಡಲು ಪ್ರೀತಿಸುತ್ತೇನೆ. ಅವರೊಟ್ಟಿಗೆ  ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಆದಾಗ್ಯೂ, 30 ವರ್ಷದ ಸಾರ್ವಜನಿಕ ಸೇವೆಯಲ್ಲಿ ನನ್ನಗಾಗಲಿ, ಅಥವಾ ತಮ್ಮ ಕುಟುಂಬಕ್ಕಾಗಲೀ ಅನ್ಯಾಯಯುತವಾಗಿ ಸಾವಿರಾರು ಡಾಲರ್ ವೆಚ್ಚ ಮಾಡಿಲ್ಲ ಎಂದು ಝಿಂಕೆ ಟ್ವೀಟರ್ ನಲ್ಲಿ ಹೇಳಿದ್ದಾರೆ. ರಿಯಾನ್ ಝಿಂಕೆ   ಅಮೆರಿಕಾ ಸರ್ಕಾರದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿದ್ದಾರೆ. ಜಾನ್ ಕೆಲಿ, ನಿಕ್ಕಿ ಹಲೈ, ಮತ್ತಿತರ ಅಧಿಕಾರಿಗಳನ್ನು ಕಾರಣ ಬಹಿರಂಗಪಡಿಸದೆ  ಅಧಿಕಾರದಿಂದ ಕೆಳಗಿಳಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا