Urdu   /   English   /   Nawayathi

ಕನ್ನಡ ಮಾದ್ಯಮ ವಿದ್ಯಾರ್ಥಿಗೆ ಒಲಿಯಿತು 'ನಾಸಾ' ಬಾಹ್ಯಾಕಾಶ ಸಂಶೋಧನೆ ಅವಕಾಶ!

share with us

ಬದಿಯಡ್ಕ: 15 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಕನ್ನಡ ಮಾದ್ಯಮದಲ್ಲಿ ಓದುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದರ ನಡುವೆ ಕನ್ನಡ ಮಾದ್ಯಮದಲ್ಲೇ ಓದಿದ್ದ ಕಾಸರಗೋಡಿನ ವಿದ್ಯಾರ್ಥಿಯೊಬ್ಬನಿಗೆ ಇದೀಗ ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ದಲ್ಲಿ ಉನ್ನತ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಗಿಟ್ಟಿಸಿದ್ದಾನೆ! ಕಾಸರಗೋಡು ಜಿಲ್ಲೆ ಬದಿಯಡ್ಕದ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಖಲೀಲ್ ತಾನು ಕನ್ನಡ ಮಾದ್ಯಮದಲ್ಲೇ ಕಲಿತು ಇದೀಗ ನಾಸಾದಲ್ಲಿ ಉನ್ನತ ವೈಜ್ಞಾನಿಕ ಸಂಶೋಧನೆ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯ ವೃದ್ದಿ  ಕಾರ್ಯದಲ್ಲಿ ಅವಕಾಶ ಪಡೆದಿದ್ದಾನೆ. ಮೇರಿ ಕ್ಯೂರಿ ಸಂಸ್ಥೆ ಈ ವಿದ್ಯಾರ್ಥಿಗೆ ಸಂಶೋಧನೆಗಾಗಿ ಆರ್ಥಿಕ ನೆರವು ನೀಡಿದ್ದು ಪುಲ್ ಕಾಂ ಯೋಜನೆಯಡಿ ರಾಕೆಟ್ ಉಡಾವಣೆಗೆ ಬೇಕಾದ ಉಡಾವಣಾ ವಾಹನದ ತಾಂತ್ರಿಕ ಸಾಮರ್ಥ್ಯ ಹೆಚ್ಚಳಕ್ಕೆ ಈ ಸಂಶೋಧನೆ ನೆಅವಾಗಲಿದೆ.

ಈ ಸಂಶೋಧನೆಯಲ್ಲಿ ಇಬ್ರಾಹಿಂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಬದಿಯಡ್ಕದ ವ್ಯಾಪಾರಿ ಮಜೀರ್ ಪೈಕಾ ಹಾಗೂ ಝುಮೈರಾ ಗೋಳಿಯಾಡಿ ದಂಪತಿ ಪುತ್ರರಾದ ಇಬ್ರಾಹಿಂ ಕೆಳ ಮದ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿ ಕಲಿತಿರುವ ಇವರು ಉತ್ತಮ ಶಿಕ್ಷಣ ಪಡೆದು ಅನೇಕ ಪ್ರತಿಷ್ಠಿತ ವಿದ್ಯಾರ್ಥಿ ವೇತನಗಳಿಗೆ ಸಹ ಭಾಜನರಾಗಿದ್ದಾರೆ. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದ ಇಬ್ರಾಹಿಂಮಣಿಪಾಲದ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ, ಜರ್ಮನಿಯ ಬೋಕಂನರುರ್ ಕಪ್ಯುಟೇಷನ್ ವಿಶ್ವವಿದ್ಯಾನಿಲಯದಿಂದ ಉನ್ನತ ಪದವಿ ಗಳಿಸಿದ್ದಾರೆ. ಪ್ರಸ್ತುತ ಅಮೆರಿಕಾದ ಓಹಿಯೋ ಪ್ರಾಂತದ ನಾಸಾ ಕೇಂದ್ರದಲ್ಲಿರುವ ಇವರು ರಡು ವಾರಗಳಲ್ಲಿ ನುರಿತ ಸಂಶೋಧಕರೊಡನೆ ಸಮಾಲೋಚಿಸಿ ಸಂಶೋಧನಾ ವಿಚಾರ ಮಂಡನೆಗೆ ಸಿದ್ದವಾಗುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا