Urdu   /   English   /   Nawayathi

ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ , 16 ಮಂದಿಗೆ ಗಾಯ

share with us

ಕಠ್ಮಂಡು: 15 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮಿನಿ ಟ್ರಕ್ ಒಂದು ಸುಮಾರು 400 ಮೀಟರ್ ಎತ್ತರದಿಂದ ನದಿಗೆ ಉರುಳಿ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ. ನುವಾಕೊಟ್ ಜಿಲ್ಲೆಯ ಶಿಕಾರ್ ಬೆಸಿಯಿಂದ ಗೈಯಾಂಗ್ ಪೆಡಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಟ್ರಕ್ ದುಪ್ಚೇಶ್ವರ್ ಬಳಿ ಅಪಘಾತಕ್ಕೊಳಗಾಗಿ 18 ಮಂದಿ ದುರ್ಮರಣ ಹೊಂದಿದ್ದಾರೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು  ನುವಾಕೊಟ್  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಮ್ ಲಾಲ್ ಬಾಟ್ಟರೈ ತಿಳಿಸಿದ್ದಾರೆ.

ಮಿನಿ ಟ್ರಕ್ ನಲ್ಲಿ ಅಂತ್ಯಸಂಸ್ಕಾರವೊಂದಕ್ಕೆ ಹೋಗಿದ್ದ ಪ್ರಯಾಣಿಕರು ವಾಪಾಸ್ಸಾಗುತ್ತಿದ್ದಾಗ ಈ  ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂಬುದು ತಿಳಿದುಬಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا