Urdu   /   English   /   Nawayathi

ಹೆಬಳೆ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿ ಎ,ಸಿ,ಬಿ ವಶಕ್ಕೆ

share with us

ಭಟ್ಕಳ: 29 ನವೆಂಬರ್ (ಫಿಕ್ರೋಖಬರ್ ಸುದ್ದಿ) ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿ ಲಂಚ ಪಡೆಯುವ ವೇಳೆ ಎ,ಸಿ,ಬಿ ಪೋಲೀಸರು ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಬಳೆ ಪಂಚಾಯ್ತಿಯಲ್ಲಿರುವ ಗಣಪತಿ ನಾರಾಯಣ ನಾಯ್ಕ್ ಅವರ ಸಹೋದರ ಮಂಜುನಾಥ ನಾರಾಯಣ್ ನಾಯ್ಕ್ ಮರಣಹೊಂದಿದ್ದು, ಇವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಪಂಚಾಯ್ತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಗ್ರಾಮ ಲೆಕ್ಕಾಧಿಕಾರಿ ಅಣ್ಣಯ್ಯ ಲಮಾಣಿ ಅವರು 2,000 ರೂ ಬೇಡಿಕೆ ಇಟ್ಟಿದ್ದು, ಗಣಪತಿ ನಾಯ್ಕ್ ಅವರು ಕಾರವಾರದ ಎ,ಸಿ,ಬಿ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎ,ಸಿ,ಬಿ ಅವರು ದಾಳಿ ನಡೆಸಿದ್ದಾರೆ. ಅಣ್ಣಯ್ಯ ಅವರನ್ನು ವಶಕ್ಕೆ ಪಡೆದ ಎ,ಸಿ,ಬಿಯವರು ಬುಧವಾರ ಬೆಳಿಗ್ಗೆ ಸುಮಾರು 10 ಗಂಟೆಯಿಂದ ಮಧ್ಯಾಹ್ನದವರೆಗೆ ವಿಚಾರಿಸಿ ಮುಂದಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ ಎಂದು ತಿಳಿದು ಬಂದಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا