Urdu   /   English   /   Nawayathi

ಮಂಗಳನ ಸ್ಪರ್ಶಿಸಿದ ನಾಸಾ ನೌಕೆ

share with us

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಇನ್‌ಸೈಟ್‌ ನೌಕೆಯನ್ನು ಮಂಗಳನ ಅಂಗಳದಲ್ಲಿ ಇಳಿಸಿದೆ. ಇದು ಮಂಗಳನ ಬಗ್ಗೆ ಇನ್ನಷ್ಟು ಹೆಚ್ಚಿನ ಅಧ್ಯಯನ ನಡೆಸಲಿದೆ. ಸದ್ಯ ಎಲಿಸಿಯಮ್‌ ಪ್ಲಾನಿಶಿಯ ಎಂಬ ಸಮತಟ್ಟಾದ ಪ್ರದೇಶ ದಲ್ಲಿ ಇನ್‌ಸೈಟ್‌ ಇಳಿದಿದೆ. ಮಂಗಳನ ಮೇಲೆ ಇಳಿಯುತ್ತಿ ದ್ದಂತೆಯೇ ಹಲವು ಮಾಹಿತಿಯನ್ನು ನೌಕೆ ಕಳುಹಿಸಿದೆ. ಅಷ್ಟೇ ಅಲ್ಲ, ಕೆಲವೇ ನಿಮಿಷಗಳಲ್ಲಿ ಚಿತ್ರವನ್ನೂ ಕಳುಹಿಸಿದೆ. ಈ ನೌಕೆಯ ಪ್ರಮುಖ ಉದ್ದೇಶವೇ ಮಂಗಳನ ಬಗ್ಗೆ ಆಳವಾಗಿ ಅಧ್ಯಯನ ನಡೆಸುವುದಾಗಿದೆ. ಫ್ರಾಂಕೋ ಬ್ರಿಟಿಷ್‌ ಸೀಸ್ಮೋಮೀಟರುಗಳನ್ನು ಇದು ಹೊಂದಿದ್ದು, ಮಂಗಳನಲ್ಲಿ ನಡೆಯುವ ಕಂಪನಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇನ್ನೊಂದೆಡೆ ನೆಲವನ್ನು ಅಗೆಯುವ ನೌಕೆಯು 5 ಮಿ.ಮೀ ವರೆಗೆ ನೆಲದ ತಾಪಮಾನವನ್ನು ಅಳೆಯಲಿದೆ.

ಇದರಿಂದ ಮಂಗಳ ಎಷ್ಟು ಸಕ್ರಿಯವಾಗಿದ್ದಾನೆ ಎಂಬುದನ್ನು ತಿಳಿಯಬಹುದಾಗಿದೆ. ತನ್ನ ಕಕ್ಷೆಯಲ್ಲಿ ಮಂಗಳ ಹೇಗೆ ಪರಿಭ್ರಮಿಸುತ್ತಿದೆ ಎಂಬುದನ್ನು ಅಧ್ಯಯನ ನಡೆಸಲು ನೌಕೆಯು ರೇಡಿಯೋ ಟ್ರಾನ್ಸ್‌ಮಿಶನ್‌ ಅನ್ನೂ ಬಳಸಿಕೊಳ್ಳಲಿದೆ. ಇನ್‌ಸೈಟ್‌ ಕಳುಹಿಸುವ ಮಾಹಿತಿಯನ್ನು ರವಾನಿಸಲು ಹಾಗೂ ನೌಕೆಗೆ ಭೂಮಿಯಿಂದ ಸಂವಹನಗಳನ್ನು ತಲುಪಿಸಲು ಪ್ರತ್ಯೇಕ ಎರಡು ಸಣ್ಣ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಲಾಗಿದೆ. ಅತ್ಯಂತ ಸಣ್ಣದಾಗಿದ್ದು, ಪರಿಣಾಮಕಾರಿಯಾಗಿ ಸಂವಹನಗಳನ್ನು ತಲುಪಿಸುತ್ತವೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا