Urdu   /   English   /   Nawayathi

ಕಣ್ಮುಂದೆ ಕಂಡ ಬಸ್‌ ದುರಂತದ ಬಗ್ಗೆ ಇಬ್ಬರನ್ನು ರಕ್ಷಿಸಿದ ಗ್ರಾಮಸ್ಥರ ಮಾತುಗಳನ್ನು ಕೇಳಿ, ಕಣ್ಣಾಲಿಗಳು ನೀರಾಗುತ್ತವೆ!

share with us

ಮಂಡ್ಯ: 26 ನವೆಂಬರ್ (ಫಿಕ್ರೋಖಬರ್ ಸುದ್ದಿ) ನಾನು ರಸ್ತೆ ಪಕ್ಕದಲ್ಲಿಯೇ ಕುಳಿತಿದ್ದೆ. ಚಾಲಕ ಅತಿವೇಗವಾಗಿಯೇ ಬಸ್‌ ಓಡಿಸಿಕೊಂಡು ಬಂದ. ದುರಂತ ನಡೆಯುವ ಸ್ಥಳದ ಹಿಂದೆ ರಸ್ತೆಯಲ್ಲಿ ಗುಂಡಿ ಇದ್ದ ಕಾರಣಕ್ಕೋ ಏನೋ ಬಸ್‌ನ್ನು ಸ್ವಲ್ಪ ನಿಧಾನ ಮಾಡಿದ. ಅದಾದ ಬಳಿಕ ಏನಾಯಿತೋ ಗೊತ್ತಿಲ್ಲ. ಬಸ್‌ ನೇರವಾಗಿ ನಾಲೆಗೆ ಪಲ್ಟಿ ಹೊಡೆಯಿತು. ತಕ್ಷ ಣ ನಾನು ಮತ್ತೆ ನಮ್ಮ ಪಕ್ಕದಲ್ಲಿದ್ದ ರಾಮು ಇಬ್ಬರು ಸ್ಥಳಕ್ಕೆ ಓಡಿಹೋದೆವು. ಅಷ್ಟರೊಳಗೆ ಮತ್ತಿಬ್ಬರು ಬಂದರು. ಬಸ್‌ ನಿರ್ವಾಹಕ ಬಸ್‌ನಿಂದ ಹೊರಗೆ ಬಂದು ಆಚೆ ದಡಸೇರಿ ಅಲ್ಲಿಂದ ಓಡಿಹೋದ. ಡ್ರೈವರ್‌ ಸೀಟಿನ ಬಳಿ ಇದ್ದ ಬಾಗಿಲು ತೆಗೆದುಕೊಂಡು ಹೊರಗೆ ಬಂದು ನಾಲೆಯಲ್ಲಿ ಕೊಚ್ಚಿಹೋಗುತ್ತಿದ್ದ. ನಾವೇ ಕೈಕೊಟ್ಟು ದಡಕ್ಕೆ ಎಳೆದುಕೊಂಡೆವು. 

ಅದಾದ ಬಳಿಕ ಮತ್ತೊಬ್ಬ ವದೆಸಮುದ್ರದ ಗಿರೀಶ್‌ ಹೊರಗೆ ಬಂದ. ಬಾಲಕನೊಬ್ಬ ಕಿಟಕಿಯ ಬಾಗಿಲಿಂದ ತಲೆ ಹೊರಗೆ ಹಾಕಿದ್ದ. ಈ ವೇಳೆ ರಾಮು ನೀರಿಗೆ ಬಿದ್ದು ಮಗುವನ್ನು ದಡಕ್ಕೆ ಎಳೆದುತಂದ. ಡ್ರೈವರ್‌ ಆಗಲೇ ನೀರು ಕುಡಿದಿದ್ದ. ನಾವು ಸ್ವಲ್ಪ ದಣಿವಾರಿಸಿಕೊಳ್ಳಲಿ ಎಂದು ಬಿಟ್ಟು ಬಸ್‌ನಲ್ಲಿದ್ದವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾದೆವು. ಈ ವೇಳೆ ಡ್ರೈವರ್‌ ಅಲ್ಲಿಂದ ಓಡಿಹೋದ. ನಾವು ಹೇಗಾದರೂ ಮಾಡಿ ಬಸ್‌ನಲ್ಲಿರುವವರನ್ನು ಬದುಕಿಸಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಯಾರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಒಬ್ಬ ಮಹಿಳೆ ಹೊರಗೆ ಬಂದರೂ ಅಷ್ಟರಲ್ಲಿ ಪ್ರಾಣಬಿಟ್ಟಿದ್ದರು. ಅಷ್ಟರೊಳಗೆ ಗ್ರಾಮಸ್ಥರು ಸೇರಿ ಬಸ್‌ನಲ್ಲಿದ್ದ ಮೃತದೇಹವನ್ನು ಹೊರತೆಗೆದವು. ನನ್ನ ಕಣ್ಣಮುಂದೆಯೇ 30 ಜನ ಮೃತಪಟ್ಟರು,'' ಎಂದು ದುಃಖಿತರಾದರೂ ಕನಗನಮರಡಿ ಗ್ರಾಮದ ಅಂಕೇಗೌಡ. 

ಪನಿಶ್ ತೆ ಡ್ರೈವರ್.
ನಾವೆಂದೂ ಈ ರೀತಿಯ ದುರಂತ ನೋಡಿರಲಿಲ್ಲ. ನಮ್ಮೂರಲ್ಲೂ ಇಂದೆಂದೂ ಈ ರೀತಿಯ ದುರಂತ ಸಂಭವಿಸಿರಲಿಲ್ಲ. ಘಟನೆಗೆ ಚಾಲಕನ ಅಜಾಗರೂಕತೆ, ಹದಗೆಟ್ಟ ರಸ್ತೆಯೇ ಕಾರಣ. ಬಸ್‌ ಸ್ವಲ್ಪ ಮುಂದೆ ಬಂದಿದ್ದರೂ ಇಷ್ಟೊಂದು ದೊಡ್ಡ ದುರಂತ ಸಂಭವಿಸುತ್ತಿರಲಿಲ್ಲ. ಬಸ್‌ ನಾಲೆಗೆ ಬಿದ್ದಿದ್ದರಿಂದಲೇ ದುರಂತ ಸಂಭವಿಸಿದ್ದು ಘಟನಾ ಸ್ಥಳದಿಂದ ಬಸ್‌ 200 ಅಡಿ ಮುಂದೆ ಬಂದಿದ್ದರೂ ಜಮೀನಿಗೆ ಬಿದ್ದು ಸಣ್ಣಪುಟ್ಟ ಸಾವು ನೋವು ಸಂಭವಿಸುತ್ತಿತ್ತು. ನಮ್ಮೂರಿಗೆ ಗೌರ್ನಮೆಂಟ್‌ ಬಸ್‌ ಸೌಲಭ್ಯವೇ ಇಲ್ಲ. ಕೇವಲ ಖಾಸಗಿ ಬಸ್‌ ಮಾತ್ರ ಬರುತ್ತಿದ್ದವು. ಶಾಲೆಗೆ ಹೋಗುವ ಮಕ್ಕಳು ಇದೇ ಖಾಸಗಿ ಬಸ್‌ಗಳಲ್ಲಿಯೇ ಹೋಗಬೇಕಿತ್ತು. ಇಲ್ಲವಾದರೆ ಸೈಕಲ್‌ಗಳಲ್ಲಿ ಹೋಗಬೇಕು. ಈ ಘಟನೆಯಿಂದ ವದೆಸಮುದ್ರ, ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ವದೆಸಮುದ್ರ ಗ್ರಾಮದಲ್ಲಂತೂ ನೀರವಮೌನ ಆವರಿಸಿದೆ. ಶತ್ರುಗಳಿಗೂ ಇಂತಹ ಕಷ್ಟ ಬರೋದು ಬೇಡಪ್ಪ ಎಂದು ಗ್ರಾಮದ ನಾಗರಾಜು ಕಣ್ಣೀರಾದರು.

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا