Urdu   /   English   /   Nawayathi

ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಜೀವವನ್ನೇ ಪಣಕ್ಕಿಟ್ಟ 'ಮಹಾ' ಸಿಎಂ ಪತ್ನಿ ನಡೆಗೆ ಟೀಕೆ, ವಿಡಿಯೋ ವೈರಲ್!

share with us

ನವದೆಹಲಿ: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತೆ ಸುರಕ್ಷತಾ ಅಧಿಕಾರಗಳ ಮಾತನ್ನು ಕೇಳದೆ ಅಪಾಯಕಾರಿ ಸೆಲ್ಫಿಯನ್ನು ತೆಗೆದುಕೊಳ್ಳಲು ಮಹಾರಾಷ್ಟ್ರ ಸಿಎಂ ಪತ್ನಿ ಮುಂದಾಗಿದ್ದು ಸಿಎಂ ಪತ್ನಿಯ ಈ ನಡೆ ಇದೀಗ ಟೀಕೆಗೆ ಗುರಿಯಾಗಿದೆ.  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಪಣಕ್ಕೆ ಒಡ್ಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮುಂಬೈ-ಗೋವಾ ಕ್ರೂಝ್ ಸೇವೆ(ಬೋಟ್ ಸೇವೆ)ಯನ್ನು ಉದ್ಘಾಟಿಸಿದ ಅಮೃತ ಫಡ್ನಾವಿಸ್ ಅವರು ನಂತರ ರಕ್ಷಣಾ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸುರಕ್ಷಾ ನಿಯಮವನ್ನು ಮುರಿದು ಅಪಾಯದ ಸೆಲ್ಫಿ ತೆಗೆದುಕೊಂಡಿದ್ದಾರೆ. 

ಬೋಟ್ ನ ತುದಿಗೆ ಹೋಗುವುದು ಹೆಚ್ಚು ಅಪಾಯಕಾರಿ. ಬೋಟ್ ತೇಲಾಡುತ್ತಿರುವ ವೇಳೆ ಆಯಾತಪ್ಪಿ ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಎಚ್ಚರಿಕೆಯನ್ನು ಸುರಕ್ಷತಾ ಅಧಿಕಾರಿಗಳು ನೀಡಿದ್ದರೂ ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ಅಮೃತ ಮಗ್ನರಾಗಿದ್ದಾರೆ.

ANI✔@ANI

: Amruta Fadnavis, wife of Maharashtra CM Devendra Fadnavis, being cautioned by security personnel onboard India's first domestic cruise Angria. She had crossed the safety range of the cruise ship.

14:43 - 21 Oct 2018

https://youtu.be/3xZ199-k2Ik

 ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا