Urdu   /   English   /   Nawayathi

ವಿದ್ಯುತ್ ತಂತಿ, ತೆಂಗಿನ ಕಾಯಿ ಕದಿಯೋದೇ ಈ ಕಳ್ಳರ ಕಾಯಕ

share with us

ತುರುವೇಕೆರೆ: 19 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಲ್ಯುಮಿನಿಯಂ ತಂತಿ ಮತ್ತು ತೆಂಗಿನ ಕಾಯಿಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿರುವ ಪೊಲೀಸರು 6,61,200 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ಗಾಜನೂರಿನ ವೀರೇಶ್, ತುಮಕೂರು ತಾಲ್ಲೂಕಿನ ಹಾಲೂರಿನ ಆನಂದ್ ಮತ್ತು ಮಲ್ಲೇಶ್, ತುಮಕೂರಿನ ಇರ್ಫಾನ್ ಅಹಮದ್ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಕಸಬಾದ ಚೌಡೇನಹಳ್ಳಿ ಬಳಿ ಹಾಕಿದ್ದ ವಿದ್ಯುತ್ ತಂತಿ ಇನ್ನಿತರ ವಸ್ತುಗಳನ್ನು ಹಾಗೂ ತೆಂಗಿನ ಕಾಯಿ ಕಳವಿನ ಬಗ್ಗೆ ತುರುವೇಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಡಾ.ಶೋಭಾರಾಣಿ ಅವರ ಆದೇಶದಂತೆ ತುರುವೇಕೆರೆ ವೃತ್ತ ನಿರೀಕ್ಷಕ ಮೊಹಮ್ಮದ್ ಸಲೀಂ ಮತ್ತು ಪಿಎಸ್‍ಐ ಜೆ.ಪಿ.ರಾಜು ಅವರ ನೇತೃತ್ವದ ತಂಡ ಆರೋಪಿಗಳ ಸೆರೆಗೆ ಮುಂದಾಗಿದ್ದಾರೆ.

ಅಪರಾಧಿ ಪತ್ತೆ ದಳದ ಸಿಬ್ಬಂದಿಗಳು ಅ.16ರ ತಡರಾತ್ರಿ ಚಿಕ್ಕೋನಹಳ್ಳಿ ಗೇಟ್ ಬಳಿ ಹೋಗುವಾಗ ಅಲ್ಲಿ ಯಾರೋ 8 ರಿಂದ 10 ಜನ ಅಪರಿಚಿತರು ಅಂಗಡಿ ಬಳಿ ಓಡಾಡುತ್ತಿದ್ದರಿಂದ ಅನುಮಾನದಿಂದ ಅವರನ್ನು ವಿಚಾರಿಸಲು ಮುಂದಾದಾಗ ಭಯದಿಂದ 4 ಜನ ಆರೋಪಿಗಳು ತಾವು ತಂದಿದ್ದ ಬುಲೆರೋ ವಾಹನದಲ್ಲಿ ಪರಾರಿಯಾಗಲು ಮುಂದಾದರೆ, ಇನ್ನುಳಿದ 6 ಜನ ತೋಟದ ಸಾಲುಗಳಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.
ಪತ್ತೆ ದಳದ ಪೊಲೀಸರು ಬುಲೆರೋ ವಾಹನದಲ್ಲಿದ್ದ 4 ಆರೋಪಿಗಳನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಲಾಗಿ ಕಳವಿನ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರಿಂದ ಬುಲೆರೋ ವಾಹನ, ಒಂದು ಚವರ್‍ಲೇಟ್ ವಾಹನ, 3770 ಕೆ.ಬಿ.ತೂಕದ ವಿದ್ಯುತ್ ಅಲ್ಯು ಮಿನಿಯಂ ತಂತಿ, ಎರಡು ಬಾಕ್ಸ್, ಇಸ್ನುಲೇಟರ್ ಎರಡು ಬಾಕ್ಸ್ , 45 ಕೆ.ಎನ್ ಡಿಕ್ಸ್, 160 ಕೆ.ಜಿ ಎರಡು ಬಂಡಲ್ ಗೈವರ್, 40 ಪೀಸ್ ಗೇ ರಾಡ್, 2000 ಸಾವಿರ ತೆಂಗಿನ ಕಾಯಿ ಇವುಗಳ ಒಟ್ಟು ಮೌಲ್ಯ 6,61,200 ರೂಪಾಯಿಗಳ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಜೆ.ಪಿ.ಕೃಷ್ಣಪ್ಪ, ಎಎಸ್‍ಐ ರಾಮಚಂದ್ರಪ್ಪ, ಎಎಸ್‍ಐಗಳಾದ ಮಂಜುನಾಥ್, ಶಶಿಧರ್, ಮಲ್ಲಿಕಾರ್ಜುನ್, ಮಧುಸೂಧನ್, ಕೇಶವ್ ಶಂಕರ್ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا