Urdu   /   English   /   Nawayathi

ಆಂತರಿಕ ಭದ್ರತಾ ದಳದ ಡಿಜಿಗೇ ಆನ್‌ಲೈನ್‌ ವಂಚನೆ

share with us

ಬೆಂಗಳೂರು: 19 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅನಕ್ಷರಸ್ಥರನ್ನು ಸೈಬರ್‌ ಖದೀಮರು ವಂಚಿಸುವುದು ಸಾಮಾನ್ಯ. ಆದರೆ ಈಗ ರಾಜ್ಯ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಹಿರಿಯ ಐಪಿಎಸ್‌ ಅಧಿಕಾರಿ ಅಶಿತ್‌ ಮೋಹನ್‌ ಪ್ರಸಾದ್‌ ಅವರನ್ನೇ ಯಾಮಾರಿಸಿ ಅವರ ಬ್ಯಾಂಕ್‌ ಖಾತೆಯಿಂದ 2 ಲಕ್ಷ ರೂ. ಲಪಟಾಯಿಸಿದ್ದಾರೆ. ಸಾಮಾನ್ಯ ಜನರಿಗೆ ಎಚ್ಚರಿಕೆ ನೀಡಬೇಕಾದ ಹಿರಿಯ ಪೊಲೀಸ್‌ ಅಧಿಕಾರಿಗಳೇ ವಂಚಕರ ಬಲೆಗೆ ಬೀಳುತ್ತಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. 

ಸಿಐಡಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸಾದ್‌ ಎಸ್‌ಬಿಐ ರಿಚ್ಮಂಡ್‌ಟೌನ್‌ ಶಾಖೆಯಲ್ಲಿ ಮತ್ತು ಕೆನರಾ ಬ್ಯಾಂಕ್‌ ಕಾವೇರಿ ಭವನ ಶಾಖೆಯಲ್ಲಿ ಖಾತೆ ಹೊಂದಿದ್ದು, ಎರಡು ಡೆಬಿಟ್‌ ಕಾರ್ಡ್‌ ಹೊಂದಿದ್ದಾರೆ. ಅ.15ರಂದು ಮಧ್ಯಾಹ್ನ ಅಪರಿಚಿತರು ಕರೆ ಮಾಡಿ ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಡೆಬಿಟ್‌ ಕಾರ್ಡ್‌ ಅವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಹೀಗಾಗಿ, ಅದನ್ನು ವಿಸ್ತರಣೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಅವರ ಜತೆ ಪ್ರಸಾದ್‌ ತಮ್ಮ ಬ್ಯಾಂಕ್‌ ಕಾರ್ಡ್‌ ಮಾಹಿತಿ ಹಂಚಿಕೊಂಡಿದ್ದಾರೆ. ಆರೋಪಿಗಳು ಕರೆ ಕಟ್‌ ಮಾಡಿದ ಕ್ಷಣದಲ್ಲೇ ಅವರ ಎರಡು ಖಾತೆಗಳಿಂದ 2 ಲಕ್ಷ ರೂ. ವರ್ಗಾವಣೆಯಾಗಿದೆ. 

ರಾಜ್ಯ ಪೊಲೀಸ್‌ ಮುಖ್ಯಸ್ಥರೂ ವಂಚನೆಗೊಳಗಾಗಿದ್ದರು 

2015ರಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾದ ಓಂಪ್ರಕಾಶ್‌ ಕೂಡ ಸೈಬರ್‌ ಖದೀಮರಿಂದ ವಂಚನೆಗೆ ಒಳಗಾಗಿದ್ದರು. ದಿಲ್ಲಿ ಮೂಲದ ಅಶ್ರಫ್‌ ಅಲಿ ಎಂಬಾತನನ್ನು ಬಂಧಿಸಿದ್ದರು. ನಗರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಈ ವರ್ಷ 3 ಸಾವಿರಕ್ಕೂ ಪ್ರಕರಣಗಳು ದಾಖಲಾಗಿವೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا