Urdu   /   English   /   Nawayathi

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

share with us

ಹಿಸಾರ್/ಹರಿಯಾಣ: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಹರಿಯಾಣದ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಮತ್ತೊಂದು ಕೊಲೆ ಪ್ರಕರಣದಲ್ಲಿ ಬುಧವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎರಡು ಅಪರಾಧ ಪ್ರಕರಣಗಳಲ್ಲಿ ರಾಮ್‌‍ಪಾಲ್‌ ಅವರನ್ನುದೋಷಿ ಎಂದು ನ್ಯಾಯಾಲಯ ಘೋಷಿಸಿತ್ತು. ಇವರನ್ನು 2014ರ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ಎರಡು ಕೊಲೆ ಪ್ರಕರಣಗಳಲ್ಲಿ ರಾಮ್‌ಪಾಲ್‌ ಭಾಗಿಯಾಗಿದ್ದರು. ಅವರಿಗೆ ಮೊದಲ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು.

ಮತ್ತೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ಪಾಲ್‌ ಮತ್ತು ಅವರ 27 ಮಂದಿ ಅನುಯಾಯಿಗಳಿಗೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್‌ ನ್ಯಾಯಾಧೀಶ ಡಿ.ಆರ್. ಚಾಲಿಯಾ ಬುಧವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಈ ಪ್ರಕರಣದಲ್ಲೂ ರಾಮ್‍ಪಾಲ್‌ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. 

ರಾಮ್‌ಪಾಲ್‌ ಮತ್ತು ಅವರ ಅನುಯಾಯಿಗಳ ಮೇಲೆ 2014ರ ನವೆಂಬರ್‌ 19ರಂದು ಬರ್ವಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2014ರ ನವೆಂಬರ್‌ 18ರಂದು ಹಿಸ್ಸಾರ್‌ನ ಬರ್ವಾಲ ಪಟ್ಟಣದ ಸತ್‌ಲೋಕ್‌ ಆಶ್ರಮದಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ ರಾಮ್‌ಪಾಲ್‌ ಬಂಧಿಸಲು ಪೊಲೀಸರು 2014ರ ನವೆಂಬರ್ 19ರಂದು ಆಶ್ರಮಕ್ಕೆ ತೆರಳಿದ್ದರು. ಆಗ ಆಶ್ರಮದಲ್ಲಿ ಉಂಟಾದ ಗಲಭೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸಾವಿಗೀಡಾಗಿತ್ತು. ಈ ಎರಡೂ ಪ್ರಕರಣಗಳ ಸಂಬಂಧ ರಾಮ್‌ಪಾಲ್‌ ವಿರುದ್ಧ ಕೊಲೆ, ಕೊಲೆಗೆ ಯತ್ನ, ಪಿತೂರಿ, ಶಸ್ತ್ರಾಸ್ತ್ರ ಅಕ್ರಮ ಸಂಗ್ರಹ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದವು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا