Urdu   /   English   /   Nawayathi

ವಿವಾದಗಳ ನಡುವೆಯೇ 2019ಕ್ಕೆ ಭಾರತಕ್ಕೆ ಹಾರಲಿವೆ ರಾಫೆಲ್ ಯುದ್ಧ ವಿಮಾನಗಳು!

share with us

ಒರ್ಲ್ಯಾಂಡೊ: 16 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರತದಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದ ಹಸಿರಾಗಿರುವಾಗಲೇ 201ರಿಂದಲೇ ರಾಫೆಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆಯ ಸಿಇಒ ಎರಿಕ್ ಟ್ರ್ಯಾಪಿಯರ್ ಹೇಳಿದ್ದಾರೆ. ಅಮೆರಿಕದ ಒರ್ಲಾಂಡೋದಲ್ಲಿ ನಡೆಯುತ್ತಿರುವ ವಿಶ್ವದ ಅತೀ ದೊಡ್ಡ ಜೆಟ್ ವಿಮಾನಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸುದ್ದಿಸಂಸ್ಥೆಯೊಂದರೊಂದಿಗೆ ಮಾತನಾಡಿದ ರಾಫೇಲ್ ಜೆಟ್ ಯುದ್ಧ ವಿಮಾನ ತಯಾರಕ ಕಂಪನಿ ಫ್ರಾನ್ಸ್ ನ ಡಸಾಲ್ಟ್ ಕಂಪನಿ ಸಿಇಒ ಎರಿಕ್ ಟ್ರ್ಯಾಪಿಯರ್ ಅವರು, 2019ರ ಮಧ್ಯಭಾಗದಿಂದ ಭಾರತಕ್ಕೆ ರಾಫೆಲ್ ಯುದ್ಧ ವಿಮಾನಗಳು ಹಸ್ತಾಂತರವಾಗಲಿದೆ.

ಅಲ್ಲದೆ ಪ್ರಸ್ತುತ 36 ರಾಫೆಲ್ ಯುದ್ಧ ವಿಮಾನಗಳಿಗೆ ಒಪ್ಪಂದವಾಗಿದ್ದು, ಭವಿಷ್ಯದ ದಿನಗಳಲ್ಲಿ ಮತ್ತಷ್ಟು ವಿಮಾನಗಳನ್ನು ಖರೀದಿಸುವ ಕುರಿತು ಭಾರತ ಸರ್ಕಾರ ಒಲವು ತೋರಬಹುದು ಎಂದು ಎರಿಕ್ ಟ್ರ್ಯಾಪಿಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಭಾರತದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ರಾಫೇಲ್ ಡೀಲ್ ಕುರಿತಂತೆ ಇದೊಂದು ದೊಡ್ಡ ಹಗರಣ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ಯುದ್ಧವಿಮಾನ ಒಪ್ಪಂದ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದೂ ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡುತ್ತಿದ್ದು, ರಾಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ಡಸಾಲ್ಟ್ ಕಂಪನಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ರಿಲಯನ್ಸ್ ಅನ್ನು ಆಯ್ಕೆ ಮಾಡಿಕೊಂಡದ್ದು ಡಸಾಲ್ಟ್ ಕಂಪನಿ ನಿರ್ಧಾರವಲ್ಲ. ಬದಲಾಗಿ ಕೇಂದ್ರ ಸರ್ಕಾರವೇ ಅನಿಲ್ ಅಂಬಾನಿಗೆ ನೆರವು ನೀಡುವ ಸಲುವಾಗಿ ರಿಲಯನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಡಸಾಲ್ಟ್ ಮೇಲೆ ಒತ್ತಡ ಹೇರಿತ್ತು ಎಂದು ಆರೋಪಿಸಿತ್ತು.

ಅಲ್ಲದೆ ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸ್ ಗೆ ಭೇಟಿ ನೀಡಿದ್ದರು. ಅಲ್ಲದೆ ಡಸಾಲ್ಟ್ ಕಂಪನಿಗೂ ಭೇಟಿ ನೀಡಿದ್ದರು. ರಫೇಲ್ ಡೀಲ್ ವಿವಾದವನ್ನು ಮುಚ್ಚಿ ಹಾಕಲು ನಿರ್ಮಲಾ ಸೀತಾರಾಮನ್ ಫ್ರಾನ್ಸ್ ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا