Urdu   /   English   /   Nawayathi

ಬೆಂಗಳೂರು: ಕೆ.ಆರ್. ಪುರಂ- ಸಿಲ್ಕ್ ಬೋರ್ಡ್ ನಡುವಣ ಮೆಟ್ರೋ ಮಾರ್ಗ ಮತ್ತಷ್ಟು ವಿಳಂಬ ಸಾಧ್ಯತೆ

share with us

ಬೆಂಗಳೂರು: 15 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಐಟಿ ಕಂಪನಿಗಳೇ ಹೆಚ್ಚಾಗಿರುವ ಪ್ರದೇಶದಲ್ಲಿ ಸಾಗುವ  ಕೆ. ಆರ್. ಪುರಂ- ಸಿಲ್ಕ್ ಬೋರ್ಡ್ ನಡುವಿನ ಮೆಟ್ರೋ ಮಾರ್ಗ ಸುಮಾರು  ನಾಲ್ಕೈದು ತಿಂಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕಾಮಗಾರಿಯನ್ನು ಮಾರ್ಚ್ ತಿಂಗಳಲ್ಲಿ ಗುತ್ತಿಗೆ ಪಡೆದಿದ್ದ ಹೈದ್ರರಾಬಾದ್ ಮೂಲದ  ಐಎಲ್ ಮತ್ತು ಎಫ್ ಎಸ್ ಕಂಪನಿ ಹಣಕಾಸಿನ ತೊಂದರೆ ಎದುರಿಸುತ್ತಿದ್ದು, ಮರು ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ.

ಸಿಲ್ಕ್ ಬೋರ್ಡ್- ಕೆ. ಆರ್. ಪುರಂ ನಡುವಣ 19.45 ಕಿಲೋ ಮೀಟರ್ ಉದ್ದದ  ಮೆಟ್ರೋ 2 ಎ ಹಂತಕ್ಕಾಗಿ ಬಿಎಂಆರ್ ಸಿಎಲ್  ಕರೆದಿದ್ದ ಸುಮಾರು 4, 202 ಕೋಟಿ ರೂ ಮೊತ್ತದ ಟೆಂಡರ್ ನಲ್ಲಿ ಐಎಲ್ ಮತ್ತು ಎಫ್ ಎಸ್ ಕಂಪನಿ ಕನಿಷ್ಠ ಬಿಡ್ ಸಲ್ಲಿಸಿತ್ತು.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಎಂಆರ್ ಸಿಎಲ್  ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್,  ನಮ್ಮ ಅಂದಾಜು  427 ಕೋಟಿಗಿಂತಲೂ ಹೆಚ್ಚಾಗಿದ್ದು, ಐಎಲ್ ಮತ್ತು ಎಫ್ ಎಸ್  ಕನಿಷ್ಠ ಶೇ 1.7 ರಷ್ಟು ಮಾತ್ರ ಕನಿಷ್ಠ ಬಿಡ್ ಸಲ್ಲಿಸಿದೆ. ಇತರ ಬಿಡ್ಡರ್ ಗಳು ಸುಮಾರು ಶೇ, 9 ರಷ್ಟು ಬಿಡ್ ಸಲ್ಲಿಸುವ ಸಾಧ್ಯತೆ ಇದೆ. ಐಎಲ್ ಎಫ್ ಎಸ್  ಕಂಪನಿ ಹಣಕಾಸಿನ ಸ್ಥಿತಿಗತಿಯೇ ಗಂಭೀರ ವಿಚಾರವಾಗಿದ್ದು, ಹಳಿ ಮಾರ್ಗ ಪೂರ್ಣಗೊಳಿಸುತ್ತಾರೆಯೇ ಎಂಬ ಅನುಮಾನ ಉಂಟಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯುವ ಸಾಧ್ಯತೆ ಹೆಚ್ಚಾಗಿದ್ದು, ಬೇರೆಯವರಿಗೆ  ಗುತ್ತಿಗೆ ನೀಡಲು ನಾಲ್ಕೈದು ತಿಂಗಳು ಬೇಕಾಗಲಿದೆ ಎಂದು ಹೇಳಿದ್ದಾರೆ.ಮೆಟ್ರೋದ ಇನ್ನಿತರ ಇಬ್ಬರು ಉನ್ನತ ಅಧಿಕಾರಿಗಳು ಕೂಡಾ  ಮರು ಟೆಂಡರ್  ಸಾಧ್ಯತೆ ಹೆಚ್ಚಾಗಿದೆ ಎಂದು  ತಿಳಿಸಿದ್ದಾರೆ.

ಮೈಸೂರು ರಸ್ತೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಶೇ, 75 ರಷ್ಟು  ಕಾಮಗಾರಿ ಪೂರ್ಣಗೊಂಡಿದ್ದು, ಅದರ ಬಗ್ಗೆ ಆತಂಕವಿಲ್ಲ.  ಬೆಂಗಳೂರು ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಈ ಮಾರ್ಗವನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಾಗಿ  ಅಜಯ್ ಸೇಠ್ ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا