Urdu   /   English   /   Nawayathi

ಜಮ್ಮು: ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ಮೇಯರ್ ಹೆಸರು ಘೋಷಿಸಿದ ಗವರ್ನರ್

share with us

ಶ್ರೀನಗರ: 10 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಜಮ್ಮು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ನೂತನ ಮೇಯರ್ ಹೆಸರು ಬಹಿರಂಗಪಡಿಸಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿವಾದಕ್ಕೀಡಾಗಿದ್ದಾರೆ. ಈ ಚುನಾವಣೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಬಹಿಷ್ಕರಿಸಿದೆ.  ಎನ್‍ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಮಲಿಕ್,  ಸ್ಪರ್ಧಿಸಲು ಆಗದೇ ಇರುವ ಕಾರಣ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ದುಃಖಿಸುತ್ತಿದೆ.ತಮಗೆ ಲಭಿಸಿದ ಮಾಹಿತ ಪ್ರಕಾರ ಶ್ರೀನಗರಕ್ಕೆ ನೂತನ ಮೇಯರ್ ಸಿಗಲಿದ್ದಾರೆ.

ಹೊಸ ಮೇಯರ್ ವಿದೇಶದಲ್ಲಿ ಶಿಕ್ಷಣ ಪಡೆದ ಯುವಕನಾಗಿದ್ದಾರೆ. ಈ ನೇತಾರ ಗೆದ್ದರೆ ಎರಡೂ ಪಕ್ಷಗಳಿಗೂ ಅಚ್ಚರಿಯಾಗಲಿವೆ. ಆ ಯುವಕನ ಹೆಸರು ಮಟ್ಟೂ, ಆತ ವಿದ್ಯಾವಂತ, ಆತ ಮೇಯರ್ ಆದರೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಖ್ ಅಬ್ದುಲ್ಲಾ ಅವರಿಗಿಂತ ಉತ್ತಮ ನೇತಾರನಾಗುತ್ತಾನೆ ಆತನಿಗೆ ಹೆಚ್ಚಿನ ಗೌರವಗಳು ಸಿಗಲಿದೆ ಎಂದಿದ್ದಾರೆ.

ನಾಲ್ಕು ಹಂತಗಳಲ್ಲಿ ಇಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 16ಕ್ಕೆ ಚುನಾವಣೆ ಮುಗಿಯಲಿದೆ. ಎರಡನೇ ಹಂತದ ಚುನಾವಣೆ ಇಂದು ಆರಂಭವಾಗಿದೆ.13 ವರ್ಷಗಳ ನಂತರ ಇಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا