Urdu   /   English   /   Nawayathi

ಸಿಕ್ಕಿಂಗೆ ಹೋಗುವ ಮಾರ್ಗದಲ್ಲಿ ಫೋಟೋಗ್ರಾಫರ್ ಆದ ಪ್ರಧಾನಿ ಮೋದಿ!

share with us

ಗ್ಯಾಂಗ್ಟಕ್: 24 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸಲುವಾಗಿ ಸಿಕ್ಕಿಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಫೋಟೋಗ್ರಾಫರ್ ಆಗಿದ್ದು, ತಾವು ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ವಿಮಾನದ ಮೂಲಕ ಸಿಕ್ಕಿಂಗೆ ತಲುಪಿದ ಪ್ರಧಾನಿ ಮೋದಿಯವರು ಈ ವೇಳೆ ಕೆಲ ಅದ್ಭುತ ಫೋಟೋಗಳನ್ನು ತೆಗೆದಿದ್ದಾರೆ. ತಾವು ತೆಗೆದ ಫೋಟೋಗಳನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

View image on TwitterView image on TwitterView image on TwitterView image on Twitter

Narendra Modi✔@narendramodi

Serene and splendid!

Clicked these pictures on the way to Sikkim. Enchanting and incredible!

6:00 PM - Sep 23, 2018

ಪೇಕಾಂಗ್ ಎಂಬಲ್ಲಿ ವಿಮಾನ ನಿಲ್ದಾನ ನಿರ್ಮಾಣವಾಗಿದ್ದು, ಸಿಕ್ಕಿಂ ಜನರಿಗೆ ಈ ವಿಮಾನ ನಿಲ್ದಾಣ ವರವಾಗಲಿದೆ. ರಾಜಧಾನಿ ಗ್ಯಾಂಗ್ಟಕ್ ನಿಂದ 33 ಕಿ.ಮೀ ದೂರವಿರುವ ಈ ವಿಮಾನ ನಿಲ್ದಾಣಕ್ಕೆ 2009ರಲ್ಲಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಶಂಕು ಸ್ಥಾಪನೆ ನೆರವೇರಿಸಿತ್ತು. 

201 ಎಕರೆ ಪ್ರದೇಶದಲ್ಲಿ ಗುಡ್ಡದ ಮೇಲೆ ವಿಮಾನ ನಿಲ್ದಾಣವಿದ್ದು, ಸಮುದ್ರ ಮಟ್ಟದಿಂದ 4500 ಅಡಿ ಹಾಗೂ ಪೇಕಾಂಗ್ ಗ್ರಾಮದಿಂದ 2 ಕಿ.ಮೀ ಎತ್ತರದ ಮೇಲೆ ಸ್ಥಾಪನೆಯಾಗಿದೆ. 1.75 ಕಿಮೀ ರನ್ ವೇ ಇದೆ. ಈವರೆಗೆ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣ ಸಿಕ್ಕಿಂಗೆ ಸನಿಹದ ನಿಲ್ದಾಣವಾಗಿತ್ತು. 

ಸಿಕ್ಕಿನಿಂದ ಬಾಗ್ಡೋಗ್ರಾ 2014 ಕಿಮೀ ದೂರದಲ್ಲಿದೆ,. ಪೇಕಾಂಗ್ ವಿಮಾನ ನಿಲ್ದಾಣದಿಂದ ಅಕ್ಟೋಬರ್ 4ಕ್ಕೆ ಅಧಿಕೃತ ಹಾರಾಟ ಆರಂಭವಾಗಲಿದ್ದು, ದೆಹಲಿ, ಕೋಲ್ಕತಾ, ಗುವಾಹಟಿಯಿಂದ ಸ್ಪೈಸ್ ಜೆಟ್ ಸೇವೆ ಒದಗಿಸಲಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا