Urdu   /   English   /   Nawayathi

2008 ರ ಮುಂಬೈ ಸ್ಫೋಟದ ಆರೋಪಿಗಳು ಪಾಕ್ ನವರೇ ಎಂದಿದ್ದ ಷರೀಫ್ ಗೆ ಸಮನ್ಸ್ ಜಾರಿ

share with us

ಲಾಹೋರ್: 24 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) 2008 ರ ಮುಂಬೈ ಸ್ಫೋಟದ ಆರೋಪಿಗಳು ಪಾಕಿಸ್ತಾನದವರೇ ಎಂದು ಹೇಳಿದ್ದ ಪಾಕ್ ನ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಲಾಹೋರ್ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. 

ಭಯೋತ್ಪಾದಕ ಚಟುವಟಿಕೆ ಹಿಂದೆ ಇದ್ದವರು ಪಾಕಿಸ್ತಾನದವರೇ ಎಂದು ಹೇಳಿದ್ದ ಪಾಕ್ ನ ಮಾಜಿ ಪ್ರಧಾನಿ ಷರೀಫ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಅ.08 ರಂದು ನ್ಯಾಯಾಲಯದೆದುರು ಹಾಜರಾಗುವಂತೆ ಸಮನ್ಸ್ ನೀಡಿದೆ. 

ಪ್ರಕರಣದ ಆರೋಪಿಗಳು ಪಾಕಿಸ್ತಾನದವರೇ ಆಗಿದ್ದರು ಎಂದು ಮೊದಲ ಬಾರಿಗೆ ನವಾಜ್ ಷರೀಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಡಾನ್ ಪತ್ರಿಕೆ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಬಗ್ಗೆ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ, ಮುಂಬೈ ದಾಳಿಯ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಿದ್ದರು.  ಷರೀಫ್ ಹೇಳಿಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا