Urdu   /   English   /   Nawayathi

ಪ್ರವಾಹಕ್ಕೆ ನಲುಗಿದ ಕೊಡಗು: ಸರ್ಕಾರಿ ಶಾಲೆ ಮರು ಆರಂಭ ಮತ್ತಷ್ಟು ವಿಳಂಬ

share with us

ಬೆಂಗಳೂರು: 23 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸಾವಿನ ಮಳೆ ಹಾಗೂ ಭೀಕರ ಪ್ರವಾಹದಿಂದಾಗಿ ನಲುಗಿ ಹೋಗಿರುವ ಕೊಡಗು, ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಮರು ಆರಂಭಗೊಳ್ಳಲು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರವಾಹದ ವೇಳೆ ಸಂತ್ರಸ್ತರಿಗೆ ನೆರವಿನ ಕೇಂದ್ರಗಳಾಗಿದ್ದ ಶಾಲೆಗಳು ಸಾಕಷ್ಟು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಶಾಲೆಗಳು ಮತ್ತೆ ಆರಂಭಗೊಳ್ಳಲು 6 ತಿಂಗಳು ಕಾಯಬೇಕಾಗಿದೆ. 

ಮಡಿಕೇರಿ ತಾಲೂಕಿನಲ್ಲಿರುವ 192 ಸರ್ಕಾರಿ ಶಾಲೆಗಳ ಪೈಕಿ 7 ಶಾಲೆಗಳು ಆಗಸ್ಟ್ 27 ರಿಂದ ಆರಂಭಗೊಂಡಿದ್ದು, ಶಾಲೆ ಆರಂಭಗೊಂಡರು ಮಕ್ಕಳ ಹಾಜರಾತಿ ಮಾತ್ರ ಕಡಿಮೆಯಿದೆ. ಭಯ ಮತ್ತು ಆತಂಕದಿಂದ ಹೊರಬಂದು  ಮಕ್ಕಳು ಮತ್ತೆ ಶಾಲೆಗೆ ಬರಲು ಸಮಯ ಬೇಕಾಗುತ್ತದೆ ಎಂದು ಶಿಕ್ಷಕರು ಹಾಗೂ ಅಧಿಕಾರಿಗಳು ಹೇಳಿದ್ದಾರೆ. 

ಪ್ರವಾಹದಿಂದಾಗಿ ಶಾಲಾ ಕಟ್ಟಡಗಳು ನಾಶಗೊಂಡಿವೆ ಎಂಬ ಅರ್ಥವಾಲ್ಲ. ಆದರೆ, ಶಾಲೆಗೆ ಬರಲು ಸೂಕ್ತ ರೀತಿಯ ರಸ್ತೆ ಸಂಪರ್ಕಗಳಿಲ್ಲ. ಮುಂದಿನ 6 ತಿಂಗಳಲ್ಲಿ ಎಲ್ಲಾ ಪರಿಸ್ಥಿತಿ ಸಾಮಾನ್ಯಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ರಸ್ತೆಗಳು ಯಾವಾಗ ಸರಿಹೋಗುತ್ತವೆ ಎಂಬುದರ ಕುರಿತು ಖಚಿತ ಮಾಹಿತಿಗಳಿಲ್ಲ. ರಸ್ತೆಗಳು ಸರಿಹೋದ ಕೂಡಲೆ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಮಡಿಕೇರಿ ತಾಲೂಕಿನ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. 

ಪ್ರಸ್ತುತ 7 ಶಾಲೆಗಳ ಮಕ್ಕಳನ್ನು ಸ್ಥಳೀಯ ಶಾಲೆಗಳು ಹಾಗೂ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಕೆಎಸ್ಆರ್'ಟಿಸಿ ಬಸ್ ಗಳಲ್ಲಿ ಮೊಬೈಲ್ ಸ್ಕೂಲ್ ಗಳನ್ನು ಆರಂಭಿಸಿ, ಆ ಬಸ್ ಗಳನ್ನು ಕೊಡಗು ಜಿಲ್ಲೆಗೆ ಕಳುಹಿಸಿ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಪ್ರಾಥಮಿಕ ಹಾಗೂ ಫ್ರೌಢಶಾಲಾ ಶಿಕ್ಷಣ ಇಲಾಖೆ ಕಲ್ಪಿಸಲು ನಿರ್ಧರಿಸಿದೆ. ಒಂದು ಸ್ಥಳದಲ್ಲಿ ಈ ಬಸ್ ನಿಲ್ಲಲ್ಲಿದ್ದು, 6-6 ಗ್ರಾಮದ ಮಕ್ಕಳಿಗೆ ಈ ಬಸ್ ನಲ್ಲಿ ಬೋಧನೆ ಮಾಡಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا