Urdu   /   English   /   Nawayathi

ಶಿರಾಲಿ ರಸ್ತೆ ಅಗಲೀಕರಣದ ಸಭೆಗೆ ಅಧಿಕಾರಿಗಳು ಬರದ ಕಾರಣ ಕೋಪಗೊಂಡ ಜನರು

share with us

ಭಟ್ಕಳ: 18 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭಟ್ಕಳ ತಾಲೂಕಿನ ಶಿರಾಲಿಯ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕುರಿತು ಸೋಮವಾರದಂದು ಸಭೆ ನಡೆಯಿತು. ಸಭೆಗೆ ಸಹಾಯಕ ಆಯುಕ್ತಕರು ಹಾಗೂ ತಹಶೀಲ್ದಾರ್ ಅವರು ಬರದ ಕಾರಣ ಶಿರಾಲಿ ಗ್ರಾಮದ ಸಾರ್ವಜನಿಕರು ಆಕ್ರೋಶಗೊಂಡಿದ್ದರು ಎಂದು ತಿಳಿದು ಬಂದಿದೆ. ಅಧಿಕಾರಿಗಳು ಬರದ ಕಾರಣ ಕೇಳಿದಾಗ ಪಂಚಾಯ್ತಿಯ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯವರ ಆದೇಶದಂತೆ ಚುನಾವಣೆಯ ಕುರಿತು ಚರ್ಚಿಸಲು ಕಾರವಾರಕ್ಕೆ ತೆರಳಿದ್ದಾರೆ ಎಂದು ಹೇಳಿದರು. ಇದನ್ನು ಕೇಳಿದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ರಾಮಚಂದ್ರ ನಾಯ್ಕ್ ಅವರು ಅಸಮಧಾನ ವ್ಯಕ್ತ ಪಡಿಸಿದರು ಎಂದು ಹೇಳಲಾಗಿದೆ. ಸಭೆಯನ್ನು ಕುರಿತು ಮಾತನಾಡಿದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಅವರು “ಶಿರಾಲಿ ಸಾರ್ವಜನಿಕರು 45 ಮೀಟರ್ ರಸ್ತೆ ಅಗಲೀಕರಣ ನಡೆಸಲು ಸಹಕಾರ ನೀಡಲಿದ್ದು, 30 ಮೀಟರ್ ಅಗಲೀಕರಣ ನಡೆಸಿದ್ದಲ್ಲಿ ಪಂಚಾಯ್ತಿಯ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಹೇಳಿದರು. ಈ ಬಗ್ಗೆ ಜಿಲ್ಲಾಧಿಕಾರಿಯವರ ಜೊತೆ ಬಹಳಷ್ಟು ಬಾರಿ ಚರ್ಚಿಸಿದ್ದು, ಅವರ ಸ್ಪಂದಿಸದ ಕಾರಣ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು. ಸಭೆಯಲ್ಲಿದ್ದ ಹೆದ್ದಾರಿ ಪ್ರಾಧಿಕಾರಿಗಳಿಗೆ ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸಿದಾಗ “ಈಗ ರಾಜ್ಯ ಸರ್ಕಾರ ಜಾಗವನ್ನು ನೀಡಲು ಹಿಂಜರಿದ ಕಾರಣ 30 ಮೀಟರಿನ ಅಗಲೀಕರಣವನ್ನು ಸೀಮಿತಗೊಳಿಸಿದ್ದೇವೆ” ಎಂದು ಹೇಳಿದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا