Urdu   /   English   /   Nawayathi

ಯಾವ ಅಸಮಾಧಾನವೂ ಇಲ್ಲ,ಮಂತ್ರಿಗಿರಿ ಕೇಳುವುದು ತಪ್ಪಾ?:ಸಿದ್ದರಾಮಯ್ಯ

share with us

ಬೆಂಗಳೂರು: 18 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್‌ ಪಕ್ಷದಲ್ಲಿ  ಯಾವುದೇ ಅಸಮಾಧಾನ ಇಲ್ಲ. ಎಲ್ಲವೂ ಸರಿಯಾಗಿ ಇದೆ. ಮಂತ್ರಿಗಿರಿ ಕೇಳಿದರೆ ಭಿನ್ನಮತ ಸ್ಫೋಟ ಅನ್ನುವುದು ಸರಿಯಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ  ಲಜ್ಜೆಗೆಟ್ಟ ಬಿಜೆಪಿ  ಮಾನಾಮರ್ಯಾದೆ ಬಿಟ್ಟು  ಅಧಿಕಾರ ದಾಹ ದಿಂದ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು. 

ಕಾಂಗ್ರೆಸ್‌ ಪಕ್ಷದ ಹಲವರನ್ನು ಬಿಜೆಪಿ ಸಂಪರ್ಕಿಸಿರುವುದು ಬಹಿರಂಗವಾಗಿದೆ. ಬಿಜೆಪಿ ಸರ್ಕಾರ ಬೀಳಿಸಲು ಯತ್ನಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು. 

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.ಸರ್ಕಾರ ಸುಭದ್ರವಾಗಿರಲಿದೆ ಎಂದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا