Urdu   /   English   /   Nawayathi

ಜನವರಿ 3ಕ್ಕೆ ಚಂದ್ರಯಾನ-2 ಉಡಾವಣೆ ಸಾಧ್ಯತೆ

share with us

ಭಾರತದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಚಂದ್ರಯಾನ್-2 ಉಪಗ್ರಹ ಮುಂದಿನ ವರ್ಷ ಜನವರಿ 3ರಂದು ಉಡಾವಣೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ.

ಪಿಎಸ್‍ಎಲ್‍ವಿ ಸಿ-42 ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಉಡ್ಡಯನ ಮಾಡಿದ ನಂತರ ಇಸ್ರೋ ಭವಿಷ್ಯ ಯೋಜನೆಗಳ ಬಗ್ಗೆ ಅವರು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಭಾರತದ ಎರಡನೇ ಚಂದ್ರಯಾನ 2019ರ ಜನವರಿ 3ರಂದು ವಿದ್ಯುಕ್ತವಾಗಿ ಆರಂಭವಾಗಲಿದೆ. ಆ ಮೂಲಕ ದಕ್ಷಿಣ ಧ್ರುವ(ನಾರ್ತ್ ಪೋಲ್) ಬಳಿ ತೆರಳಲಿರುವ ವಿಶ್ವದ ಪ್ರಥಮ ಅಭಿಯಾನವಾಗಲಿದೆ. ಜ.3 ರಿಂದ ಫೆ.16ರವರೆಗೆ ಈ ಮಹತ್ವದ ಅಭಿಯಾನಕ್ಕೆ ಯೋಜನೆ ರೂಪಿಸಿ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಈ ಅವಧಿಯಲ್ಲೇ ಚಂದ್ರಯಾನ್-2 ಸಾಕಾರಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು.

ಇನ್ನು ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿ ಹೊಂದಲಾಗಿದೆ. ಮುಂದಿನ ಆರು ತಿಂಗಳಲ್ಲಿ 10 ಉಪಗ್ರಹಗಳನ್ನು ನಭಕ್ಕೆ ಕಳುಹಿಸುವ ಹಾಗೂ ಎಂಟು ಉಪಗ್ರಹ ಉಡಾವಣೆ ವಾಹನಗಳ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು. ಎರಡು ವಾರಕ್ಕೆ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا