Urdu   /   English   /   Nawayathi

90ರ ದಶಕದಲ್ಲೇ ಬೌದ್ಧ ಶಿಕ್ಷಕರು ಲೈಂಗಿಕ ಕಿರುಕುಳ ನೀಡುತ್ತಿದ್ದದ್ದು ನನಗೆ ತಿಳಿದಿತ್ತು: ದಲೈ ಲಾಮಾ

share with us

ಹೇಗ್: 17 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) 1990ರ ದಶಕದಿಂದಲೇ ಬೌದ್ಧ ಧರ್ಮದ ಶಿಕ್ಷಕರಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಅಂತಹ ಆರೋಪಗಳು "ಹೊಸದಲ್ಲ" ಎಂದು ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ. ನಾಲ್ಕು ದಿನಗಳ ನೆದರ್ ಲ್ಯಾಂಡ್ ಪ್ರವಾಸದಲ್ಲಿರುವ ದಲೈ ಲಾಮಾ ಬೌದ್ಧ ಶಿಕ್ಷಕರಿಂದ ಲೈಂಗಿಕ ಕಿರುಕುಲಕ್ಕೆ ಒಳಗಾಗಿದ್ದ ಸಂತ್ರಸ್ಥರನ್ನು ಶುಕ್ರವಾರ ಭೇಟಿಯಾಗಿದ್ದರು. ವಿಶ್ವದಾದ್ಯಂತ ಲಕ್ಷಾಂತರ ಬೌದ್ಧ ಧರ್ಮದವರು ಪೂಜಿಸಲ್ಪಟ್ಟಿರುವ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ಯುರೋಪ್ ಪ್ರವಾಸದ ಭಾಗವಾಗಿ ನೆದರ್ ಲ್ಯಾಂಡ್ ಗೆ ಭೇಟಿ ಕೊಟ್ಟಿದ್ದಾರೆ. ಆಗ ಅಲ್ಲಿನ 12 ಜನ ಸಂತ್ರಸ್ತರು ದಲೈಲಾಮಾ ಅವರನ್ನು ಭೇಟಿ ಮಾಡಲು ಕೇಳಿಕೊಂಡಿದ್ದರು.

"ಬೌದ್ದ ಧರ್ಮವನ್ನು ನಾವು ತೆರೆದ ಮನಸ್ಸು ಹಾಗು ಹೃದಯದಿಂದ ಒಪ್ಪಿಕೊಂಡಿದ್ದೇವೆ.ಆದರೆ ಇದರ ಹೆಸರಲ್ಲಿಯೇ ಅತ್ಯಾಚಾರಕ್ಕೆ ಸಹ ಒಳಗಾಗಿದ್ದೇವೆ" ಸಂತ್ರಸ್ಥರೊಬ್ಬರು ಲಾಮಾಗೆ ನೀಡಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಇದಕ್ಕೆ ಉತ್ತರಿಸಿದ ದಲೈ ಲಾಮಾ "ನನಗೆ ಇದರ ಕುರಿತಂತೆ ಮೊದಲೇ ತಿಳಿದಿದೆ, ಇದರಲ್ಲಿ ಹೊಸದೇನೂ ಇಲ್ಲ.  25 ವರ್ಷದ ಹಿಂದೆಯೇ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಬೌದ್ದ ಗುರುಗಳು ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿತ್ತು." ಡಚ್ ಸಾರ್ವಜನಿಕ ದೂರದರ್ಶನ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

"ಈ ರೀತಿ ನಡೆದುಕೊಳ್ಳುವವರು ಯಾರೇ ಆದರೂ ಅವರು ಬುದ್ದನ ಬೋಧನೆಯಲ್ಲಿ ಗೌರವ ಹೊಂದಿರುವುದಿಲ್ಲ. ಈಗ ಎಲ್ಲವೂ ಜಗಜ್ಜಾಹೀರಾಗಿದ್ದು ಅವರು ತಮ್ಮ ಮರ್ಯಾದೆಯ ಕುರಿತಂತೆ ಕಾಳಜಿ ವಹಿಸಬೇಕಿದೆ" ಲಾಮಾ ಹೇಳಿದ್ದಾರೆ.

ಕ, ಪ್ರ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا