Urdu   /   English   /   Nawayathi

ಮತ್ತೆ ಕಮರ್ಷಿಯಲ್ ಲಾಂಚ್ ನತ್ತ ಮುಖ ಮಾಡಿದ ಇಸ್ರೋ: ಬ್ರಿಟನ್ ಉಪಗ್ರಹ ಉಡಾವಣೆ!

share with us

ವಿದೇಶಿ ಉಪಗ್ರಹಗಳನ್ನು ಉಡವಾಣೆ ಮಾಡುವುದರಲ್ಲಿ ದಾಖಲೆ ನಿರ್ಮಿಸಿರುವ ಇಸ್ರೋ ಈಗ ಮತ್ತೊಂದು ವಿದೇಶಿ ಉಪಗ್ರಹವನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ. 

ಭೂ ವೀಕ್ಷಣೆಗಾಗಿ ಇರುವ ಬ್ರಿಟನ್ ನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಜವಾಬ್ದಾರಿಯನ್ನು ಇಸ್ರೋ ಹೊತ್ತುಕೊಂಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ರಾತ್ರಿ 10:00 ಗಂಟೆ ವೇಳೆಗೆ  ನೋವಾಸರ್ ಮತ್ತು ಎಸ್ 1-4 ಉಡಾವಣೆ ಮಾಡಲಾಗುತ್ತದೆ. 

ಉಪಗ್ರಹ ನಿಗಾವಹಿಸುವ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಪ್ರತಿ ಬಾರಿ ಸಂಚರಿಸಿದಾಗಲೂ ಸೂರ್ಯನ ಬೆಳಕಿನ ಆಂಗಲ್(ಕೋನ) ಒಂದೇ ರೀತಿಯಲ್ಲಿರುವಂತೆ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದ್ದು, ಅರಣ್ಯ ಸಮೀಕ್ಷೆ, ಪ್ರವಾಹ, ಭೂಕಂಪ, ಕಾಳ್ಗಿಚ್ಚಿನಂತಹ ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಈ ಉಪಗ್ರಹಗಳು ಸಹಕಾರಿಯಾಗಲಿವೆ. 2019 ರ ಮಾರ್ಚ್ ವರೆಗೂ ಇಸ್ರೋ 19 ಮಿಷನ್ ಗಳನ್ನು ಪಟ್ಟಿಯಲ್ಲಿ ಹೊಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا