Urdu   /   English   /   Nawayathi

ಪಾಕಿಸ್ತಾನ ಯಾವುದೇ ದೇಶದ ಯುದ್ಧದ ಭಾಗವಾಗುವುದಿಲ್ಲ ಎಂದ ಇಮ್ರಾನ್‌

share with us

ಇಸ್ಲಾಮಾಬಾದ್‌: 10 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭವಿಷ್ಯದಲ್ಲಿ ಪಾಕಿಸ್ತಾನ ಯಾವುದೇ ದೇಶದ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ ಎಂದು ಪಾಕ್‌ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದರು. ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ 'ರಕ್ಷ ಣಾ ಮತ್ತು ಹುತಾತ್ಮರ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ನಾನು ಪ್ರಾರಂಭದಿಂದಲೂ ಯುದ್ಧದ ವಿರೋಧಿಯಾಗಿದ್ದು, ನಮ್ಮ ಸರಕಾರದ ವಿದೇಶಾಂಗ ನೀತಿ ಸಹ ಅದೇ ರೀತಿ ಇರಲಿದೆ,'' ಎಂದರು. 

ಪಾಕಿಸ್ತಾನ ಸೇನೆಯಂತೆ ಜಗತ್ತಿನಲ್ಲಿ ಬೇರೆ ಯಾವುದೇ ಸೇನೆ ಉಗ್ರರೊಡನೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿಲ್ಲ. ದೇಶವನ್ನು ಎಲ್ಲಾ ಬೆದರಿಕೆ ಹಾಗೂ ಭಯೋತ್ಪಾದನೆಯಿಂದ ರಕ್ಷಿಸುವಲ್ಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಯೋತ್ಪಾದನೆ ಎದುರಿಸಲು ಸದಾ ಸಿದ್ಧವಿರುವ ಮತ್ತು ಅದರ ವಿರುದ್ಧ ಹೋರಾಡುತ್ತಿರುವ ದೇಶದ ಸಶಸ್ತ್ರ ಪಡೆಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು. 

ಶಾಂತಿಯುತ ಸಹಭಾಗಿತ್ವದಲ್ಲಿ ಪಾಕಿಸ್ತಾನವು ನಂಬಿಕೆ ಇಟ್ಟುಕೊಂಡಿದೆ. ಎಲ್ಲಾ ನೆರೆಯ ರಾಷ್ಟ್ರಗಳು ಮತ್ತು ಇಡೀ ಪ್ರಪಂಚದೊಂದಿಗೆ ಪರಸ್ಪರ ಸಹಕಾರ ವೃದ್ಧಿಸಲು ಬಯಸಿದೆ. ವಿಶ್ವಸಂಸ್ಥೆಯ ಪ್ರಕಾರ ಕಾಶ್ಮೀರ ವಿಷಯದಲ್ಲಿ ಅಂತಿಮ ನಿರ್ಣಯ ಅನಿವಾರ್ಯ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅದು ತಾರ್ಕಿಕ ಅಂತ್ಯ ಕಾಣುವವರೆಗೂ ಸರಕಾರ ತನ್ನ ಸಂಪೂರ್ಣ ಹೋರಾಟವನ್ನು ಮುಂದುವರಿಸಲಿದೆ ಎಂದು ಇಮ್ರಾನ್‌ ಹೇಳಿದರು. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا