Urdu   /   English   /   Nawayathi

2 ತಿಂಗಳ ಮಗುವನ್ನು ಸಾಹಸದಿಂದ ರಕ್ಷಿಸಿದ NDRF ಸಿಬ್ಬಂದಿ; watch

share with us

ಕೊಡಗು/ಮಡಿಕೇರಿ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ವರುಣನ ಆರ್ಭಟಕ್ಕೆ ಕೊಡಗಿನಲ್ಲಿ ಮನೆ, ಮಠ ಕಳೆದುಕೊಂಡು ಜನರು ಕಂಗಾಲಾಗಿದ್ದರೆ, ಮತ್ತೊಂದೆಡೆ ಜನರ ರಕ್ಷಣೆಗೆ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದ್ದು, ಎನ್ ಡಿಆರ್ ಎಫ್ ಸಿಬ್ಬಂದಿಯೊಬ್ಬರು 2 ತಿಂಗಳ ಮಗುವನ್ನು ಎದೆಗವಚಿಕೊಂಡು ರಭಸದಿಂದ ಹರಿಯುತ್ತಿರುವ ತಂತಿ ಮೂಲಕ ಜಾರಿಕೊಂಡು ಬಂದು ರಕ್ಷಿಸಿರುವು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಡಿಕೇರಿಯ ತಂತಿಪಾಲ ಎಂಬಲ್ಲಿ ಕಾರವಾರದಿಂದ ಬಂದ ರಕ್ಷಣಾ ಪಡೆಯ ಸಿಬ್ಬಂದಿ ಮಗುವಿನ ಪ್ರಾಣ ರಕ್ಷಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಡ ಸೇರಿದ ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ ಮೇಲೆ ಪೋಷಕರಿಗೆ ಒಪ್ಪಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ 2 ತಿಂಗಳ ಮಗುವನ್ನು ರಕ್ಷಿಸಿದ ಮಹತ್ವದ ಕ್ಷಣ ಎಂದು ಬರೆದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

https://youtu.be/hSkJ5vPRPuI

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا