Urdu   /   English   /   Nawayathi

ಜಲಪ್ರಳಯಕ್ಕೆ ಮಾನವನ ತಪ್ಪುಗಳೇ ಕಾರಣ : ಹೈಕೋರ್ಟ್ ಸಿಜೆ ವಿಷಾದ

share with us

ಬೆಂಗಳೂರು: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕೇರಳ, ಕೊಡಗು ಜಲಪ್ರಳಯದ ವಿಷಯ ಹೈಕೋರ್ಟ್‍ನಲ್ಲಿಂದು ಪ್ರಸ್ತಾಪವಾಯಿತು.   ಮುಖ್ಯನ್ಯಾಯಮೂರ್ತಿಗಳಾದ ದಿನೇಶ್‍ಮಹೇಶ್ವರಿ ಅವರು ಮೌಖಿಕ ಅಭಿಪ್ರಾಯವ್ಯಕ್ತಪಡಿಸಿ, ಇಂದಿನ ಜಲಪ್ರಳಯ ಮಾನವ ನಿರ್ಮಿತ ತಪ್ಪುಗಳಿಂದಾಗಿವೆ. ಉಕ್ಕಿ ಹರಿಯುತ್ತಿರುವ ನೀರು, ಕುಸಿಯುತ್ತಿರುವ ಗುಡ್ಡಗಳಿಗೆ ಪ್ರಕೃತಿ ವಿಕೋಪಗೊಳ್ಳಲು ಮಾನವರೇ ಕಾರಣ ಎಂದು ಹೇಳಿದರು.

ಇದು ಏಕಾಏಕಿ ಒಂದು ದಿನಕ್ಕೆ ಆಗಿರುವ ತಪ್ಪಲ್ಲ. ಇನ್ಯಾದರು ನಾವು ಎಚ್ಚೆತ್ತುಗೊಳ್ಳದಿದ್ದರೆ ಸರ್ವನಾಶವಾಗಬೇಕಾಗುತ್ತದೆ ಎಂದು ಪ್ರವಾಹ ಪರಿಸ್ಥಿತಿಯನ್ನು ಉಲ್ಲೇಖಿಸಿದರು. ಭೂಕಂಪವೇ ಆಗಿದ್ದರೆ ಏಕಾಏಕಿ ಆಗಿದೆ ಎಂದು ಹೇಳಬಹುದಿತ್ತು. ನಿರಂತರ ಬೆಟ್ಟ, ಗುಡ್ಡ ಕುಸಿತ ಒಂದೆರಡು ದಿನದಲ್ಲ. ಅದು ಮಾನವ ನಿರ್ಮಿತ ತಪ್ಪುಗಳೇ ಎಂದು ಹೇಳಿದರು.
ಕಾರ್ಕಳದ ಕಣಜೂರು, ಕ್ವಾರಿಹಳ್ಳದ ನೀರು ಕಲುಷಿತಗೊಂಡಿರುವ ಬಗ್ಗೆ ವಕೀಲ ಚಂದ್ರನಾಥ್ ಅವರು ವಾದ ಮಂಡಿಸುವ ಸಂದರ್ಭದಲ್ಲಿ ಮುಖ್ಯನ್ಯಾಯಾಧೀಶರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا