Urdu   /   English   /   Nawayathi

ದೆಹಲಿಯಲ್ಲಿ ತಾಯಿ-ಮಗ ನಿಗೂಢ ಸಾವು, ಕೊಲೆ ಶಂಕೆ

share with us

ನವದೆಹಲಿ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ತಾಯಿ ಮತ್ತು ಮಗ ನಿಗೂಢವಾಗಿ ಮೃತಪಟ್ಟಿರುವ ಘಟನೆ ರಾಜಧಾನಿ ದಿಲ್‍ಶಾದ್ ಗಾರ್ಡನ್ ಪ್ರದೇಶದಲ್ಲಿ ನಡೆದಿದ್ದು, ಇದನ್ನು ಕೊಲೆ ಎಂದು ಶಂಕಿಸಲಾಗಿದೆ. ದೆಹಲಿಯ ದಿಲ್‍ಶಾದ್ ಗಾರ್ಡನ್ ಏರಿಯಾದ ಅಪಾರ್ಟ್‍ಮೆಂಟ್ ಒಂದರಲ್ಲಿ 51 ವರ್ಷದ ಮಹಿಳೆಯ ಶವ ಬೆಡ್ ಬ್ಕಾಕ್ಸ್ (ಹಾಸಿಗೆ ಪೆಟ್ಟಿಗೆ) ಒಳಗೆ ಪತ್ತೆಯಾಗಿದ್ದರೆ. 21 ವರ್ಷದ ಆತನ ಮಗನ ಶವ ಶೌಚಾಲಯದಲ್ಲಿ ಕಂಡು ಬಂದಿದೆ. ಇವರಿಬ್ಬರನ್ನು ಉಸಿರುಗಟ್ಟಿಸಿ ಕೊಂದಿರುವ ಶಂಕೆ ಇದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ತಾಯಿ-ಮಗನ ನಿಗೂಢ ಸಾವಿನ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿದು ಬರಲಿದ್ದು, ತನಿಖೆ ಮತ್ತಷ್ಟು ಚುರುಕಾಗಲಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا