Urdu   /   English   /   Nawayathi

ಕದ್ದ ಪರ್ಸ್ ಹಿಂತಿರುಗಿಸಿದ ಕಳ್ಳ! ಮುಂಬೈ ಪೋಲೀಸರ ಫನ್ನಿ ಟ್ವೀಟ್ ಗೆ ನೆಟ್ಟಿಗರಿಂದ ಭಾರೀ ಸ್ಪಂದನೆ

share with us
ಮುಂಬೈ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮುಂಬೈ ಪೋಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಉತ್ತಮ ವಿಡಿಯೋ, ಮೀಮ್ಸ್ ಮೂಲಕ ನಾಗರಿಕರಿಗೆ ಜಾಗೃತಿ ಸಂದೇಶ ರವಾನಿಸುತ್ತಿರುವುದು ಸೋಷಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಲಿರುತ್ತದೆ. ಈ ಬಾರಿ ಸಹ ಅವರು ಮತ್ತೆ ಉತ್ತಮ ಮೀಮ್ಸ್, ಸೃಜನಶೀಲ ವೀಡಿಯೋ, ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದು ನೆಟ್ಟಿಗರಿಂದ ಸಾಕಷ್ತು ಮೆಚ್ಚುಗೆ ಗಳಿಸಿದೆ. ಈ ಬಾರಿ ಮುಂಬೈ ಪೋಲೀಸರು ಪಿಕ್ ಪಾಕೆಟ್ ಗೆ ಸಂಬಂಧಿಸಿದ ವೀಡಿಯೋ ಒಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊ<ಡಿದ್ದು ಇದು ಕೇವಲ ಫನ್ನಿ ವೀಡಿಯೋವಾಗಿದ್ದರೂ ಸಹ ವಾಸ್ತವ ಪರಿಣಾಮ ಮಾತ್ರ ತುಂಬಾ ಗಂಭೀರವಾಗಿದೆ.

Mumbai Police✔@MumbaiPolice

The video is funny, but the consequences in reality will be quite serious!

10:53 - 20 Aug 2018

EyeOpenersForYou ಎನ್ನುವ ಟ್ಯಾಗ್ ನೊಂದಿಗೆ 22-ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಇದೆ. ಇದರಲ್ಲಿ ಓರ್ವ ಪಿಕ್ ಪಾಕೆಟರ್ ವ್ಯಕ್ತಿಯೊಬ್ಬರ ಪರ್ಸ್ ಕದಿಯಲು ಬಯಸುತ್ತಾನೆ.ಸರತಿ ಸಾಲಿನಲ್ಲಿ ತನ್ನ ಮುಂದೆ ನಿಂತ ವ್ಯಕ್ತಿಯ ಪರ್ಸ್ ಕದಿಯುತ್ತಾನೆ ಆದರೆ ಅದೇ ವೇಳೆ ಕಳ್ಳನು ತಾನು ಸಿಸಿಟಿವಿ ಕ್ಯಾಮರಾದ ಕಣ್ಗಾವಲಿನಲ್ಲಿದ್ದೇನೆ ಎನ್ನುವ್ಬುದನ್ನು ಗಮನಿಸಿ ಕಳವು ಮಾಡಿದ್ದ ಪರ್ಸ್ ಮರಳಿಸಲು ಮುಂದಾಗುತ್ತಾನೆ.

 

Mumbai Police✔@MumbaiPolice

 · 7h

The video is funny, but the consequences in reality will be quite serious! pic.twitter.com/rcQqypvsqF

Disney Baba@disneybaba

Similar one   pic.twitter.com/KJKgnYkkzC

12:21 - 20 Aug 2018

ಸಾಮಾಜಿಕ ಮಾಧ್ಯಮದಲ್ಲಿ ಈ ಟ್ವೀಟ್ ಸಾಕಷ್ಟು ಸದ್ದು ಮಾಡಿದ್ದು ಮಾತ್ರವಲ್ಲದೆ ಇದನ್ನೇ ಅನುಸರಿಸಿ ಇದೇ ರೀತಿಯ ಅನೇಕ ಕಳ್ಳತನದ ವೀಡಿಯೋಗಳನ್ನು ಅನೇಕ ಜನರು ಟ್ವೀಟ್ ಮಾಡುತ್ತಲಿದ್ದಾರೆ.ಅಲ್ಲದೆ ಮುಂಬೈ ಸುತ್ತಮುತ್ತ ಪೋಲೀಸ್ ಇಲಾಖೆ ಏನಾದರೂ ಸಿಸಿಸ್ಟಿವಿ ಅಳವಡಿಸಲು ಸಿದ್ದತೆ ನಡೆಸಿದೆಯೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

Mumbai Police✔@MumbaiPolice

 · 7h

The video is funny, but the consequences in reality will be quite serious! pic.twitter.com/rcQqypvsqF

Annabel Dsouza@annabel_dsouza2

Gagging on my morning coffee. Thanks @MumbaiPolice for ur warmhearted humor  pic.twitter.com/HYcc8FK6cx

11:08 - 20 Aug 2018

 ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا