Urdu   /   English   /   Nawayathi

ಕೇರಳದಲ್ಲಿ ಕೊಂಚಮಟ್ಟಿಗೆ ತಗ್ಗಿದ ಮಳೆ ಆರ್ಭಟ, ಮುಂದುವರೆದ ರಕ್ಷಣಾ ಕಾರ್ಯ

share with us

ತಿರುವನಂತಪುರಂ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶತಮಾನದ ಬೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ದೇವರನಾಡು ಕೇರಳದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಚುರುಕುಗೊಂಡಿದೆ. ನೆರೆ ಪೀಡಿತ 14 ಜಿಲ್ಲೆಗಳಲ್ಲಿ ಸಾವಿರಾರು ಸಂತ್ರಸ್ತರು ರಕ್ಷಣೆ ಮತ್ತು ಪರಿಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದು ಅವರಿಗೆ ಪುನವರ್ಸತಿ ಕಲ್ಪಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಲ್ಲಿ ಶನಿವಾರ ಅಬ್ಬರಿಸಿ 25ಕ್ಕೂ ಹೆಚ್ಚು ಜನರನ್ನು ಆಪೋಶನ ತೆಗೆದುಕೊಂಡಿದ್ದ ವರುಣರಾಯ ಭಾನುವಾರ ತನ್ನ ಆರ್ಭಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದಾನೆ.

ಇನ್ನೂ ನಾಲ್ಕೈದು ದಿನ ಮಳೆಯ ರಭಸ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಪ್ರಕೋಪ ಕಡಿಮೆಯಾಗಿರುವುದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಚುರುಕುಗೊಂಡಿದೆ. ಹೆಲಿಕಾಪ್ಟರ್‍ಗಳ ಮೂಲಕ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.   ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿರಾರು ಸಂತ್ರಸ್ತರು ಆತಂಕದಿಂದ ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಕೇರಳದಲ್ಲಿ ಈಗಾಗಲೇ 1,500ಕ್ಕೂ ಹೆಚ್ಚು ನಿರಾಶ್ರಿತ ಶಿಬಿರಗಳು ಹಾಗೂ 3,750 ಮೆಡಿಕಲ್ ಕ್ಯಾಂಪ್‍ಗಳು ಕಾರ್ಯಾಚರಣೆ ನಡೆಸುತ್ತಿವೆ. ಅಲ್ಲದೇ ಸ್ಥಳೀಯ ಸಂಘ-ಸಂಸ್ಥೆಗಳು ಸಹ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿವೆ. ಕರ್ನಾಟಕ ಸೇರಿದಂತೆ ನೆರೆಹೊರೆ ರಾಜ್ಯಗಳ ಸಮಾಜ ಸೇವಾ ಸಂಘಟನೆಗಳು ಅಗತ್ಯವಾದ ವಸ್ತುಗಳನ್ನು ಪೂರೈಸಿ ಮಾನವೀಯತೆ ಮೆರೆದಿವೆ. ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಕೇರಳಕ್ಕೆ ಭಾರಿ ಪ್ರಮಾಣದ ಪರಿಹಾರ ಸಾಮಗ್ರಿಗಳು ಹಾಗೂ ಧನಸಹಾಯ ರವಾನೆಯಾಗುತ್ತಿವೆ.

ರಾಜ್ಯದ ಹಲವೆಡೆ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಈವರೆಗೆ ಏಳು ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಗಳಿಗೆ ಸೇರ್ಪಡೆಯಾಗುತ್ತಿರುವ ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎನ್‍ಡಿಆರ್‍ಎಫ್, ಐಟಿಬಿಪಿ, ಭಾರತೀಯ ಸೇನೆಯ ಮೂರು ಪಡೆಗಳು, ಕರಾವಳಿ ರಕ್ಷಣಾ ಪಡೆ ಹಾಗೂ ರಾಜ್ಯ ಅಗ್ನಿಶಾಮಕ ದಳ ಸಿಬ್ಬಂದಿ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಪ್ರವಾಹ ಪೀಡಿತರನ್ನು ಸ್ಥಳಾಂತರಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا