Urdu   /   English   /   Nawayathi

ಇಂಡೋನೆಷ್ಯಾದಲ್ಲಿ ಮತ್ತೆ ಸರಣಿ ಭೂಕಂಪಕ್ಕೆ 6 ಮಂದಿ ಬಲಿ

share with us

ಮಟರಂ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಇಂಡೋನೆಷ್ಯಾದ ಪ್ರಸಿದ್ಧ ಪ್ರವಾಸಿತಾಣ ಲೊಮ್‍ಬೊಕ್ ದ್ವೀಪದಲ್ಲಿ ಸಂಭವಿಸಿದ ಸರಣಿ ಭೂಕಂಪದಿಂದ ಆರು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಭೂಕಂಪನಗಳಿಂದ ಕೆಲವು ಮನೆಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗಿವೆ. ಎರಡು ವಾರಗಳ ಹಿಂದಷ್ಟೇ 500ಕ್ಕೂ ಜನರನ್ನು ಆಪೋಶನ ತೆಗೆದುಕೊಂಡ ವಿನಾಶಕಾರಿ ಭೂಕಂಪದಿಂದ ಜನರು ಚೇತರಿಸಿಕೊಳ್ಳುತ್ತಿರುವಾಗಲೇ ನಿನ್ನೆ ಇದೇ ಪ್ರದೇಶದಲ್ಲಿ ಭೂಮಿ ಮತ್ತೆ ಮತ್ತೆ ಕಂಪಿಸುತ್ತಲೇ ಇದೆ.

ರಿಕ್ಟರ್ ಮಾಪಕದಲ್ಲಿ 6.9ರ ತೀವ್ರತೆಯ ಭೂಕಂಪನ ಸೇರಿದಂತೆ ಬಹು ಬಾರಿ ಭೂಮಿ ನಡುಗಿದೆ. ಈ ಪ್ರಕೃತಿ ವಿಕೋಪದಲ್ಲಿ ಆರು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೆ ಭೂಕಂಪ ಸಂಭವಿಸಿರುವುದರಿಂದ ದ್ವೀಪವಾಸಿಗಳು ಮತ್ತೆ ಹೆದರಿ ಕಂಗಲಾಗಿದ್ದಾರೆ. ಲೊಮ್‍ಬೊಕ್ ದ್ವೀಪದಲ್ಲಿ ನಿನ್ನೆ ಮುಂಜಾನೆ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಾದ ನಂತರ ಸರಣಿ ಕಂಪನಗಳು ಮತ್ತೆ ಮತ್ತೆ ಜನರನ್ನು ಆತಂಕಕ್ಕೆ ದೂಡುತ್ತಿವೆ. ಪೂರ್ವ ಲೊಮ್‍ಬೊಕ್‍ನ ಬೆಲಾನ್‍ಟಿಂಗ್ ಪಟ್ಟಣದಲ್ಲಿ ಭೂಮಿಯ ಏಳು ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಅಮೆರಿಕ ಭೌಗೋಳಿಕ ಸಮೀಕ್ಷಾ ಕೇಂದ್ರ ತಿಳಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا