Urdu   /   English   /   Nawayathi

ಇಮ್ರಾನ್ ಸಂಪುಟದ 16 ಸಚಿವರ ಪ್ರಮಾಣ

share with us

ಇಸ್ಲಾಮಾಬಾದ್: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪ್ರಧಾನಮಂತ್ರಿ ಇಮ್ರಾನ್ ಖಾನ್ ನೇತೃತ್ವದ ಮಂತ್ರಿಮಂಡಲದ 21 ಸದಸ್ಯರಲ್ಲಿ 16 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಾರ್ವತ್ರಿಕ ಚುನಾವಣೆಗಳ ನಂತರ ಪಾಕಿಸ್ತಾನದಲ್ಲಿ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇವರಲ್ಲಿ ಮೂವರು ಮಹಿಳೆಯರೂ ಸ್ಥಾನ ಪಡೆದಿದ್ದಾರೆ.

ರಾಷ್ಟ್ರಾಧ್ಯಕ್ಷರ ಭವನದಲ್ಲಿ ಇಂದು ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷ ಮಮ್ನೂನ್ ಹುಸೇನ್ 16 ನೂತನ ಕೇಂದ್ರ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಇಮ್ರಾನ್ ಖಾನ್ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಶಾ ಮೆಹಮೂದ್ ಖುರೇಷಿ(ವಿದೇಶಾಂಗ ಸಚಿವ), ಪವೇಜ್ ಖಟ್ಟಕ್(ರಕ್ಷಣೆ), ಅಸಾದ್ ಉಮೆರ್(ಹಣಕಾಸು), ಫವದ್ ಚೌಧರಿ(ವಾರ್ತೆ), ಶಾಫ್‍ಖತ್ ಮೆಹಮೂದ್(ಶಿಕ್ಷಣ), ಅಮಿರ್ ಕಿಯಾನಿ(ಆರೋಗ್ಯ), ನೂರು ಹಕ್ ಖಾದ್ರಿ (ಧಾರ್ಮಿಕ), ಶೇಖ್ ರಷೀದ್(ರೈಲ್ವೆ), ಖೂಸ್ರೋ ಬಖ್ತಿಯಾರ್(ಜಲ ಸಂಪನ್ಮೂಲ), ಫರೋಗ್ಹ್ ನಸೀಮ್(ಕಾನೂನು), ಖಾಲಿದ್ ಮಖ್ಬೂಲ್ ಸಿದ್ದಿಖಿ(ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ), ಚೌಧರಿ ತಾರಿಕ್ ಬಷೀರ್ ಚೀಮಾ(ರಾಜ್ಯಗಳು ಮತ್ತು ಪ್ರಾಂತೀಯ) ಹಾಗೂ ಗುಲಾಂ ಸರ್ವಾರ್ ಖಾನ್(ಪೆಟ್ರೋಲಿಂ) ಪ್ರಮಾಣ ವಚನ ಸ್ವೀಕರಿಸಿದರು.

ಮೂವರು ಮಹಿಳಾ ಸಚಿವರಾದ ಫೆಮಿದಾ ಮಿರ್ಜಾ(ಅಂತರ್ ಪ್ರಾಂತೀಯ ಸಮನ್ವಯತೆ), ಜುಬೈದಾ ಜಾಲ(ರಕ್ಷಣಾ ಉತ್ಪಾದನೆ) ಹಾಗೂ ಶಿರೀನ್ ಮಜರಿ(ಮಾನವ ಹಕ್ಕುಗಳ ರಕ್ಷಣೆ) ಅವರು ಸಹ ಇಂದು ಇಮ್ರಾನ್ ಮಂತ್ರಿ ಮಂಡಲಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಯಾಗಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا