Urdu   /   English   /   Nawayathi

ಕೇರಳಕ್ಕೆ 35 ಕೋಟಿ ರೂ. ಪರಿಹಾರ ಘೋಷಿಸಿದ ಕತಾರ್

share with us

ಕತರ್: 19 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಹಲವೆಡೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೇರಳಕ್ಕೆ ನೆರವಾಗಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ನಿನ್ನೆ ಯುಎಇ ಹೇಳಿದ ನಂತರ ಇದೀಗ ಕತಾರ್ ದೇಶ 35 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ. ಪ್ರವಾಹದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಕತಾರ್ ಪ್ರಧಾನಿ ಪ್ರಧಾನಮಂತ್ರಿ ಅಬ್ದುಲ್ಲಾ ಬಿನ್ ನಾಸರ್ ಬಿನ್ ಖಲೀಫಾ ಅಲï ಥಾನಿ, ಅಮೀರ್ ಶೇಖ್ ತಮೀಮï ಬಿನ್ ಹಮದ್ ಅಲï ತಾನಿಯವರು ಪ್ರವಾಹಪೀಡಿತರಿಗೆ 35 ಕೋಟಿ ರೂ. (5 ಮಿಲಿಯನ್ ಡಾಲರ್) ನೆರವು ನೀಡಲಿದ್ದಾರೆ ಎಂದಿದ್ದಾರೆ.

ತೆಲಂಗಾಣ ಸರ್ಕಾರ ಕೂಡ ಕೇರಳ ರಾಜ್ಯಕ್ಕೆ ನೆರವಿನ ಹಸ್ತ ಚಾಚಿದ್ದು, 100 ಟನ್ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا