Urdu   /   English   /   Nawayathi

ಕೇರಳ ನಮ್ಮ ಯಶಸ್ಸಿನ ಗಾಥೆಯ ಭಾಗ: ನೆರವಿಗೆ ಮುಂದಾಗಿದೆ ಯುಎಇ

share with us

ಅಬುದಾಭಿ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶತಮಾನದಲ್ಲೆ ಕಂಡು ಕೇಳರಿಯದ ಪ್ರವಾಹದಲ್ಲಿ ನಲುಗುತ್ತಿರುವ ಕೇರಳಕ್ಕೆ ಸಹಾಯ ಹಸ್ತ ಚಾಚಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮುಂದಾಗಿದೆ. ಕೇರಳಕ್ಕೆ ಸಕಲ ರೀತಿಯಲ್ಲಿ ನೆರವಾಗಲು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಮುಂದಾಗಿದ್ದು ಕೇರಳಕ್ಕೆ ಸಕಲ ರೀತಿಯಲ್ಲೂ ನೆರವಾಗುವಂತೆ ಯುಎಇ ಜನರನ್ನು ಕೋರಿದ್ದಾರೆ. ಯುಎಇ ಉಪಾಧ್ಯಕ್ಷರಾದ ಶೇಖ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೊಂ ಕೇರಳಕ್ಕೆ ನೆರವಾಗುವಂತೆ ಟ್ವೀಟ್ ಮಾಡಿದ್ದಾರೆ. ಭೀಕರ ಪ್ರವಾಹದಲ್ಲಿ ಸಂತ್ರಸ್ತರಾಗಿರುವ ಜನತೆಗೆ ಸಹಾಯ ಮಾಡುವ ಹೊಣೆಗಾರಿಕೆ ನಮ್ಮ ದೇಶಕ್ಕಿದೆ. ಎಲ್ಲ ರೀತಿಯಿಂದಲೂ ಕೇರಳಕ್ಕೆ ನೆರವು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

"ಕೇರಳ ನಮ್ಮ ಯಶಸ್ಸಿನ ಗಾಥೆಯ ಭಾಗವಾಗಿದ್ದು ಈಗಲೂ ಆ ಸಂಬಂಧ ಮುಂದುವರಿದಿದೆ. ಯುಎಇ ಮತ್ತು ಭಾರತ ಜಂಟಿಯಾಗಿ ಕೇರಳದ ಜನರಿಗೆ ಈ ಸಂಕಷ್ಟದ ಘಳಿಗೆಯಲ್ಲಿ ನೆರವಾಗಲಿದ್ದೇವೆ" ಎಂದು ಉಪಾಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ಭಾರತದ ಯುಎಇ ರಾಯಭಾರಿ ನವದೀಪ್ ಸಿಂಗ್ ಸೂರಿ ಅಬುದಾಬಿಯಲ್ಲಿ ಕೇರಳದ ಸಮುದಾಯ ಸಂಘಟನೆಗಳು ಮತ್ತು ಇತರ ಸಂಘ ಸಂಸ್ಥೆಗಳ ಸಭೆಯನ್ನು ಕರೆದು ಈ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.

ಕೇರಳದಲ್ಲಿ ಭೀಕರ ಪ್ರವಾಹಕ್ಕೆ 324 ಮಂದಿ ಬಲಿಯಾಗಿದ್ದು ಮೂರು ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ಸುಮಾರು 2 ಕೋಟಿ ಜನರನ್ನು ನೆರೆ ತೊಂದರೆಗೆ ಈಡು ಮಾಡಿದೆ. 

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا