Urdu   /   English   /   Nawayathi

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ಸ್ವೀಕಾರ

share with us

ಇಸ್ಲಾಮಾಬಾದ್: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ 22ನೇ ನೂತನ ಪ್ರಧಾನಮಂತ್ರಿಯಾಗಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಕೀಯ ಪ್ರವೇಶಿಸಿದ ಮಾಜಿ ಕ್ರಿಕೆಟ್ ಪಟು 22 ವರ್ಷಗಳ ನಂತರ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಜಧಾನಿ ಇಸ್ಲಾಮಾಬಾದ್‍ನ ಅಯಿವಾನ್-ಎ-ಸದ್ರ್(ರಾಷ್ಟ್ರಾಧ್ಯಕ್ಷರ ಭವನ)ದಲ್ಲಿ ನಡೆದ ಸರಳ ಸಮಾರಂಭದಲ್ಲಿ 65 ವರ್ಷ ಖಾನ್ ಅವರಿಗೆ ಅಧ್ಯಕ್ಷ ಮಮ್ನೂನ್ ಹುಸೇನ್ ಪ್ರಮಾಣ ವಚನ ಬೋಧಿಸಿದರು.

ಪಾಕಿಸ್ತಾನ ರಾಷ್ಟ್ರಗೀತೆ ಮೊಳಗಿದ ನಂತರ ಪವಿತ್ರ ಖುರಾನ್ ಪಠಣದ ಬಳಿಕ ನಡೆದ ಸಮಾರಂಭದಲ್ಲಿ ಕಪ್ಪು ಶೇರ್‍ವಾನಿ ಧರಿಸಿದ್ದ ಇಮ್ರಾನ್ ಖಾನ್ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವು ಉರ್ದು ಪದಗಳನ್ನು ಉಚ್ಚಾರಣೆ ಮಾಡಲು ಅವರಿಗೆ ಕಷ್ಟವಾಗಿ ಸ್ವಲ್ಪ ಆತಂಕಕ್ಕೆ ಒಳಗಾದವರಂತೆ ಕಂಡು ಬಂದರು.

Siddu--01

1992ರಲ್ಲಿ ವಿಶ್ವ ಕ್ರಿಕೆಟ್ ಕಪ್ ಗೆದ್ದ ಪಾಕಿಸ್ತಾನ ರಾಷ್ಟ್ರೀಯ ತಂಡದ ನಾಯಕರಾಗಿದ್ದ ಇಮ್ರಾನ್ ಕೆಲವು ಕ್ರೀಡಾ ಪಟುಗಳನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಖಾಮರ್ ಕಾವೇದ್ ಬಾಜ್ವಾ , ಮಾಜಿ ಕ್ರಿಕೆಟ್ ಪಟು ನವಜೋತ್ ಸಿಂಗ್ ಸಿಧು, ಕ್ರಿಕೆಟ್ ವೀಕ್ಷಕ ವಿವರಣೆಗಾರ ರಮೀಜ್ ರಾಜಾ, ಪಾಕ್ ಕ್ರಿಕೆಟ್ ತಂಡ ಮಾಜಿ ನಾಯಕ ವಾಸಿಂ ಅಕ್ರಮ್ ಸೇರಿದಂತೆ ವಿಶೇಷ ಅತಿಥಿಗಳು ಸಮಾರಂಭದಲ್ಲಿ ಹಾಜರಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا