Urdu   /   English   /   Nawayathi

ಆ್ಯಪಲ್‌ ಕಂಪೆ‌ನಿಯ ನೆಟ್‌ವರ್ಕ್‌ ಹ್ಯಾಕ್‌ ಮಾಡಿದ 16ರ ಬಾಲಕ

share with us

ಸಿಡ್ನಿ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಆ್ಯಪಲ್‌ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದ ಶಾಲಾ ಬಾಲಕನೊಬ್ಬ ಅದೇ ಸಂಸ್ಥೆಯ ಕಂಪ್ಯೂಟರ್‌ ವ್ಯವಸ್ಥೆಯನ್ನೇ ಹ್ಯಾಕ್‌ ಮಾಡಿದ್ದಾನೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ, ಟೆಕ್‌ ದಿಗ್ಗಜ ಕಂಪೆನಿಯು ಗ್ರಾಹಕರ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆ್ಯಪನ್‌ನ ಮೈನ್‌ಫ್ರೆಮ್‌ ಅಂದರೆ ಅತಿದೊಡ್ಡ, ಪ್ರಬಲ ಡೇಟಾ ಪ್ರೊಸೆಸಿಂಗ್‌ ಸಿಸ್ಟಂ ಅನ್ನು 16 ವರ್ಷದ ಈ ಬಾಲಕ ಮೆಲ್ಬರ್ನ್ನಲ್ಲಿರುವ ತನ್ನ ಮನೆಯಲ್ಲೇ ಕುಳಿತು ಹ್ಯಾಕ್‌ ಮಾಡಿದ್ದಾನೆ. ಅಷ್ಟೇ ಅಲ್ಲದೆ, 90ಜಿಬಿಯಷ್ಟು ರಹಸ್ಯ ಕಡತಗಳನ್ನು ಡೌನ್‌ಲೋಡ್‌ ಕೂಡ ಮಾಡಿಕೊಂಡಿದ್ದಾನೆ. ಒಂದು ವರ್ಷದಲ್ಲಿ ಈತ ಹಲವು ಬಾರಿ ಈ ಕೃತ್ಯ ಎಸಗಿದ್ದಾನೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಆ್ಯಪಲ್‌, ನಮ್ಮ ಸಿಸ್ಟಂಗೆ ಅನಧಿಕೃತ ಆಕ್ಸೆಸ್‌ ಆಗಿದ್ದು, ನಾವು ಅದನ್ನು ತಡೆದಿದ್ದೇವೆ. ಜತೆಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನೂ ನೀಡಿದ್ದೇವೆ ಎಂದಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا