Urdu   /   English   /   Nawayathi

ಕಡೇ ಕ್ಷಣದಲ್ಲಿ ಸೂರ್ಯಶಿಕಾರಿ ಮುಂದಕ್ಕೆ

share with us

ಕೇಪ್‌ ಕಾರ್ನಿವಾಲ್‌: 13 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಸೂರ್ಯನ ಸಮೀಪಕ್ಕೆ ಗುರಿ ಇಟ್ಟು ಉಡಾವಣೆಗೊಳ್ಳಲು ಒಂದೂವರೆ ನಿಮಿಷ ಇದೆ ಎನ್ನುವಾಗ ಕೇಪ್‌ ಕಾರ್ನಿವಾಲ್‌ ಉಡಾವಣಾ ಕೇಂದ್ರದಲ್ಲಿ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆ ಸ್ತಬ್ಧ ಗೊಂಡಿದೆ. ಒಂದು ನಿಮಿಷ ವಿಳಂಬ ಮಾಡಿ ಉಡಾವಣೆಗೆ ಯತ್ನಿಸಲಾಯಿತಾದರೂ ಬಳಿಕ  ಮುಂದೂಡಲಾಗಿದೆ. ಹೀಲಿಯಂ ಸಿಸ್ಟಮ್‌ನಲ್ಲಿರುವ ಅನಿಲದ ರೆಡ್‌ ಪ್ರಷರ್‌ ಅಲಾರಂ ಕೆಲಸ ಮಾಡದ್ದು ಕಾರಣ ಎಂದು ನಾಸಾ ಹೇಳಿದೆ.

ಇದೇ ಮೊದಲ ಬಾರಿಗೆ ಸೂರ್ಯನ ಪ್ರಭಾ ವಲಯವನ್ನು ಮುಟ್ಟಲಿರುವ ಈ ನೌಕೆ ಅತ್ಯಂತ ಮಹತ್ವದ್ದಾಗಿದೆ. 60 ವರ್ಷಗಳ ಹಿಂದೆ ಸೌರ ಕಾಂತ ವಲಯದ ಅಸ್ತಿತ್ವವನ್ನು ಸಾರಿದ್ದ ಯೂಜಿನ್‌ ಪಾರ್ಕರ್‌ ಕೂಡ ಉಡಾವಣೆ ವೀಕ್ಷಿಸಲು ಆಗಮಿಸಿದ್ದರು. 91 ವರ್ಷ ವಯಸ್ಸಿನ ಯೂಜಿನ್‌ ಪಾರ್ಕರ್‌ ಗೌರವಾರ್ಥ ನೌಕೆಗೆ ಪಾರ್ಕರ್‌ ಎಂದು ಹೆಸರಿಡಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا