Urdu   /   English   /   Nawayathi

ಸೆಕ್ಸ್ಟಾರ್ಶನ್: ಪೋರ್ನ್ ವೆಬ್ ಸೈಟ್ ನೋಡುವವರಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್, ಸ್ಪೇನ್ ನಿಂದ ಎಚ್ಚರಿಕೆ

share with us
ಮಾಡ್ರಿಡ್: 12 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪೋರ್ನ್ ವೆಬ್ ಸೈಟ್ ನೋಡುವವರಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಅಭಿಯಾನದ ಬಗ್ಗೆ ಸ್ಪೇನ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಸೈಬರ್ ಕ್ರಿಮಿನಲ್ ಗಳ ಸೆಕ್ಸ್ಟಾರ್ಶನ್ ತಂತ್ರವನ್ನು ಅಲ್ಲಿನ ಪೊಲೀಸರು ವಿವರಿಸಿದ್ದು, ಇಂಟರ್ ನೆಟ್ ಪೈರೆಸಿಯಿಂದ ಹಲವು ವರ್ಷಗಳ ಹಿಂದೆ ಪಡೆದುಕೊಂಡಿದ್ದ ಮಾಹಿತಿಯನ್ನು ಕ್ರಿಮಿನಲ್ ಗಳು ಇ-ಮೇಲ್ ಮೂಲಕ ಟಾರ್ಗೆಟ್ ಗಳಿಗೆ ಕಳಿಸುತ್ತಾರೆ. ಬಳಕೆದಾರರು ಪೋರ್ನ್ ವೆಬ್ ಸೈಟ್ ಗಳನ್ನು ವೀಕ್ಷಿಸಿದಾಗ ವೆಬ್ ಕ್ಯಾಮ್ ಮೂಲಕ ವ್ಯಕ್ತಿಯ ಖಾಸಗಿ ಚಿತ್ರಗಳು ತಮ್ಮ ಬಳಿ ಇವೆ ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ, ಹಣ ನೀಡದೇ ಇದ್ದರೆ ಅವುಗಳನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಸ್ಪೇನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 
ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا