Urdu   /   English   /   Nawayathi

3 ತಿಂಗಳಲ್ಲಿ 8 ದಶಲಕ್ಷ ಪ್ರಯಾಣಿಕರ ಸೆಳೆದ ಕೆಂಪೇಗೌಡ ವಿಮಾನ ನಿಲ್ದಾಣ: ಹೊಸ ದಾಖಲೆ

share with us

ಬೆಂಗಳೂರು: 07 ಆಗಸ್ಟ್ (ಫಿಕ್ರೋಖಬರ್ ಸುದ್ದಿ) 3 ತಿಂಗಳುಗಳಲ್ಲಿ 8 ದಶಲಕ್ಷ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆಯನ್ನು ಬರೆದಿದೆ.  2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 2 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿದ್ದು, ವಾರ್ಷಿಕ ಶೇ.32.9ರಷ್ಟು ಪ್ರಗತಿ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದಲ್ಲದೆ, ಏರ್ ಟ್ರಾಫಿಕ್ ಮೂಮೆಂಟ್ (ಎಟಿಎಂ) ಮತ್ತು ಸರಕು ಕಾರ್ಯಾಚರಣೆಗಳೂ ಹೆಚ್ಚಾಗಿದೆ. 2017-19 ಸಾಲಗೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜೂ.30ರಂದು ಒಂದೇ ದಿನ 98,869  ಪ್ರಯಾಣಿಕರು ಹಾರಾಟ ನಡೆಸಿದ್ದು, ಇದೊಂದು ಹೊಸ ದಾಖಲೆಯಾಗಿದೆ. 

ವಿಮಾನ ನಿಲ್ದಾಣದಲ್ಲಿ ದೇಶೀ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದೆ. ದೇಶೀಯ ಪ್ರಯಾಣಿಕರ ಸಂಖ್ಯೆ ಶೇ.35.8ರಷ್ಟು ಹೆಚ್ಚಾಗಿದ್ದರೆ, ಅಂತರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ.16.8ರಷ್ಟು ಹೆಚ್ಚಾಗಿದೆ. 

ರಜೆಯ ಕಾಲವಾಗಿದ್ದರಿಂದ ಹಾಗೂ ಏರ್'ಲೈನ್ಸ್ ಗಳು ವಿಶೇಷ ಆಫರ್ ಗಳನ್ನು ನೀಡುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏಪ್ರಿಲ್ ಹಾಗೂ ಜೂನ್ ತಿಂಗಳಿನಲ್ಲಿ 6.94 ದಶಲಕ್ಷ ದೇಶಿ ಪ್ರಯಾಣಿಕರು ಹಾಗೂ 1.08 ದಶಲಕ್ಷ ಅಂತರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಕೆ ಮಾಡಿದ್ದಾರೆ. ಏರ್ ಟ್ರಾಫಿಕ್ ಮೂವ್ಮೆಂಚ್ ನಲ್ಲಿ ಶೇ.32.9ರಷ್ಟು ಹೆಚ್ಚಳವಾಗಿದ್ದು, ಇದರ ಪರಿಣಾಮ ವಿಮಾನಗಳ ಕಾರ್ಯಾಚರಣೆ ಸಂಖ್ಯೆ ಕೂಡ 43,673 ರಿಂದ 58,054ಕ್ಕೆ ಏರಿಕೆಯಾಗಿದೆ. 

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಕಾರ್ಗೋ ವಿಭಾಗದಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡು ಬಂದಿವೆ. 2017-18ನೇ ಸಾಲಿನಲ್ಲಿ 83,584 ಟನ್ ಗಳಷ್ಟು ಸರಕು ಸಾಗಾಣಿಕೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 97,486 ಟನ್ ಗಳಷ್ಟು ಸರಕು ಸಾಗಾಣಿಕೆಯಾಗಿವೆ. ಈ ಮೂಲಕ ಶೇ.16.6ರಷ್ಟು ಬೆಳವಣಿಗೆ ಸಾಧಿಸಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا