Urdu   /   English   /   Nawayathi

ಅಂತೂ ಬಂತು ಪಾಕ್‌ ಫ‌ಲಿತಾಂಶ!

share with us

ಇಸ್ಲಾಮಾಬಾದ್‌: 29 ಜುಲೈ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದಲ್ಲಿ ಮತದಾನ ನಡೆದು 2 ದಿನಗಳ ನಂತರ ಕೊನೆಗೂ ಚುನಾವಣಾ ಆಯೋಗ ಅಧಿಕೃತ ಫ‌ಲಿತಾಂಶ ಶನಿವಾರ ಪ್ರಕಟಿಸಿದೆ. ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್ (ಪಿಟಿಐ) 116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದನ್ನು ಚುನಾವಣಾ ಆಯೋಗ ಖಚಿತಪಡಿಸುತ್ತಿ ದ್ದಂ ತೆಯೇ, ಬಹುಮತವಿಲ್ಲದ ಇಮ್ರಾನ್‌ ಸರ್ಕಾರ ರಚನೆಯ ತಯಾರಿ ನಡೆಸಿದ್ದಾರೆ. ಬಹುಮತಕ್ಕೆ 137 ಸಂಸದರ ಬೆಂಬಲ ಬೇಕಿದ್ದು, ಇತರ ಪಕ್ಷಗಳು ಮತ್ತು ಸ್ವತಂತ್ರ ಸಂಸದರನ್ನು ಸಂಪರ್ಕಿಸುತ್ತಿದ್ದಾರೆ. ಅಲ್ಲದೆ ಪಂಜಾಬ್‌ ಹಾಗೂ ಖೈಬರ್‌ ಪಾಖು¤ಂ ಕ್ತಾ$Ìದಲ್ಲಿ ಪ್ರಾಂತೀಯ ಸರ್ಕಾರವನ್ನು ಪಿಟಿಐ ರಚಿಸುವ ಬಗ್ಗೆ ಚರ್ಚೆ ನಡೆದಿದೆ. ಪಂಜಾಬ್‌ನಲ್ಲೂ ಪಿಟಿಐಗೆ ಬಹುಮತ ಕೊರತೆ ಇದೆ. ಖೈಬರ್‌ ಪಾಖು¤ಂಕ್ತಾ$Ìದಲ್ಲಿ ಪಿಟಿಐ ಬಹುಮತ ಹೊಂದಿದ್ದು ಸುಲಭ ವಾಗಿ ಸರ್ಕಾರ ರಚನೆ ನಡೆಸಬೇಕಿದೆ. ಬಲೂಚಿಸ್ತಾನದಲ್ಲೂ ಪಿಟಿಐ ಮೈತ್ರಿ ಸರ್ಕಾರ ನಡೆಸಲಿದೆ.

ಸದ್ಯ ಇಮ್ರಾನ್‌ ಖಾನ್‌ಗೆ ಸರ್ಕಾರ ರಚನೆಗೆ 3 ವಾರಗಳ ಕಾಲಾವಕಾಶವಿದೆ. ಪಾಕ್‌ ಸಂವಿಧಾನದ ಪ್ರಕಾರ ಚುನಾವಣಾ ಫ‌ಲಿತಾಂಶ ಪ್ರಕಟವಾದ 21 ದಿನಗಳೊ ಳಗಾಗಿ ಹೊಸ ಸಂಸದರಿಗೆ ಪ್ರಮಾಣ ವಚನ ಬೋಧಿಸಲು ಅಧಿವೇಶನ ಕರೆಯಬೇಕಿದ್ದು, ಅಷ್ಟರೊಳಗೆ ಸರ್ಕಾರ ರಚನೆ ಮಾಡಬೇಕಿರುತ್ತದೆ.

ಎಂಕ್ಯೂಎಂ ಜೊತೆ ಮಾತುಕತೆ: ಇಮ್ರಾನ್‌ ಆಪ್ತ ಹಾಗೂ ಪಿಟಿಐ ಮುಖಂಡ ಜಹಾಂಗೀರ್‌ ತರಿನ್‌ ಹಲವು ಮುಖಂಡರ ಜತೆೆ ಮಾತುಕತೆ ನಡೆಸುತ್ತಿ ದ್ದಾರೆ. ಮೂಲಗಳ ಪ್ರಕಾರ ಮುತ್ತಹಿದಾ ಖ್ವಾಮಿ ಮೂಮೆಂಟ್‌ (ಎಂಕ್ಯೂಎಂ) ಮುಖಂಡ ಖಾಲಿದ್‌ ಮಕೂºಲ್‌ ಜೊತೆಗೆ ಮಾತುಕತೆ ನಡೆಸಲಾಗಿದೆ. ಎಂಕ್ಯೂಎಂ 6 ಸದಸ್ಯ ಬಲ ಹೊಂದಿದೆ.

ಬಹುಮತದ ವಿಶ್ವಾಸ: ಪಕ್ಷ 137 ಸಂಸದರ ಬೆಂಬಲ ಹೊಂದಿದ್ದು, ಸರ್ಕಾರ ರಚನೆ ಸುಲಭವಾಗಿರಲಿದೆ ಎಂದು ಪಿಟಿಐ ಹೇಳಿದೆ. ಮೂಲಗಳ ಪ್ರಕಾರ 13 ಸ್ವತಂತ್ರರು, ಪಿಎಂಎಲ್‌ಕ್ಯೂ (4 ಸಂಸ ದರು), ಬಲೂಚಿಸ್ತಾನ ಅವಾಮಿ ಪಾರ್ಟಿ (4 ಸಂಸದರು) ಹಾಗೂ ಗ್ರ್ಯಾಂಡ್‌ ಡೆಮಾಕ್ರಟಿಕ್‌ ಅಲಾಯನ್ಸ್‌ ( 2 ಸಂಸ ದರು) ಜೊತೆಗೆ ಮೈತ್ರಿ ಮಾಡಿಕೊಳ್ಳಬೇ ಕಾಗುತ್ತದೆ. ವಿರೋಧ ಪಕ್ಷ ಪಿಎಂಎಲ್‌ಎನ್‌ 64, ಪಿಪಿಪಿಪಿ 43ರಲ್ಲಿ ಗೆದ್ದಿದೆ. 

ಚುನಾವಣೆ ಮೇಲೆ ಹಿಂಸೆಯ ಪ್ರಭಾವ
ಚುನಾವಣೆ ನಡೆಸಿದ ಸನ್ನಿವೇಶ ಸರಿಯಾದದ್ದಲ್ಲ. ದಾಳಿ, ರಾಜಕೀಯ ಪಕ್ಷಗಳು, ಹಾಗೂ ಪಕ್ಷದ ಮುಖಂಡ ರನ್ನು ಟಾರ್ಗೆಟ್‌ ಮಾಡಿ ದಾಳಿ ನಡೆಸಿರುವುದರಿಂದಾಗಿ ಚುನಾವಣೆ ಮುಕ್ತವಾಗಿ ನಡೆದಿಲ್ಲ. ಅಲ್ಲದೆ ಚುನಾ ವಣೆ ನಡೆಸಿದ ಸನ್ನಿವೇಶವೂ ಸರಿಯಾ ಗಿಲ್ಲ ಎಂದು ಅಂತಾರಾಷ್ಟ್ರೀಯ ಪರಿ ವೀಕ್ಷಕರ ತಂಡ ಅಭಿಪ್ರಾಯಪಟ್ಟಿದೆ. ಮೇಲ್ವಿ ಚಾರಣೆ ನಡೆಸಲು ಐರೋಪ್ಯ ಒಕ್ಕೂಟ ಹಾಗೂ ಕಾಮನ್‌ವೆಲ್ತ್‌ನ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದವು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا