Urdu   /   English   /   Nawayathi

ಪರಿಹಾರದ ಹಣಕ್ಕಾಗಿ ಕಾದು ಸುಸ್ತಾಗಿವೆ ರಾಜ್ಯದ 14 ಹುತಾತ್ಮ ಸೈನಿಕರ ಕುಟುಂಬಗಳು!

share with us

ಬೆಂಗಳೂರು: 19 ಜುಲೈ (ಫಿಕ್ರೋಖಬರ್ ಸುದ್ದಿ) ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಸುಮಾರು 14 ಸೈನಿಕರು ಹುತಾತ್ಮರಾಗಿದ್ದು, ರಾಜ್ಯ ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತಿವೆ,
ಹುತಾತ್ಮ ಕುಟುಂಬಗಳಿಗೆ ದೊರಕಬೇಕಾದ  ರಾಜ್ಯ ಸರ್ಕಾರದ ಪರಿಹಾರದ ಹಣ ಸಂಬಂಧಿತ ಕಡತಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತಿವೆ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ 14 ಸೈನಿಕರು ಹುತಾತ್ಮರಾಗಿದ್ದು, ಅದರಲ್ಲಿ 2016ರ ಫೆಬ್ರವರಿ 3 ರಂದು ಸಿಯಾಚಿನ್ ನಲ್ಲಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆ ಮಾತ್ರ ಪರಿಹಾರವಾಗಿ ಭೂಮಿ ನೀಡಲಾಗಿದೆ.
ನಿಯಮದ ಪ್ರಕಾರ ರಾಜ್ಯ ಸರ್ಕಾರ ಹುತಾತ್ಮ ಯೋಧರ ಕುಟುಂಬಕ್ಕೆ 2 ಎಕರೆ ನೀರಾವರಿ ಭೂಮಿ, ಅಥವಾ 4 ಎಕರೆ ಮಳೆ ಆಶ್ರಿತ ಜಮೀನು ಇಲ್ಲವೇ 8 ಎಕರೆ ಒಣಭೂಮಿ ಅಥವಾ 10 ವಕ್ಷ ರು ಪರಿಹಾರ ಹಣವನ್ನು ಹುತಾತ್ಮ ಯೋಧನ ವಿಧವೆ ಪತ್ನಿ ಅಥವಾ ಅವರ ಕುಟುಂಬದವರಿಗೆ ನೀಡಬೇಕು.
ಕಿರಿಯ ಅಧಿಕಾರಿಗಳು ಮತ್ತು ಇತರೆ ಶ್ರೇಣಿಯ ಅಧಿಕಾರಿಗಳಿಗೆ ಪರಿಹರವಾಗಿ 60*40 ಅಥವಾ 30*40 ನಿವೇಶನಗಳನ್ನು ನಗರ ಅಭಿವೃದ್ಧಿ ಇಲಾಖೆ ನೀಡಬೇಕಾಗುತ್ತದೆ ಒಂದು ವೇಳೆ ನಿವೇಶನ ದೊರೆಯದಿದ್ದರೇ ಹಣದ ರೂಪದಲ್ಲೂ ಪರಿಹಾರ ನೀಡಬಹುದಾಗಿದೆ.
14 ಹುತಾತ್ಮ ಯೋಧರ ಕುಟುಂಬಗಳು ತಕ್ಷಣದ ಪರಿಹಾರಕ್ಕಾಗಿ ಕಾಯುತ್ತಿವೆ, ಆದರೆ ಇಜುವರೆಗೂ ಅವರಿಗೆ ಹಣ ಅಥವಾ ಭೂಮಿ ಇಲ್ಲವೇ ನಿವೇಶನ ನೀಡಿಲ್ಲ, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೇ, ನಿವೇಶನ ಅಥವಾ ಭೂಮಿ ದೊರಕುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ,  ಹುತಾತ್ಮರ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ಹಣ ನೀಡಬೇಕು, ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು, ಅದು ಗೌರವ ಪೂರ್ಣವಾಗಿ ಕೆಲಸ  ಮುಗಿಸಬೇಕು ಎಂದು ಕರ್ನಾಟಕದಿಂದ ಪ್ರಥಮ ಬಾರಿಗೆ ಅಶೋಕ ಚಕ್ರ ಪುರಸ್ಕೃತರಾದ ಹುತಾತ್ಮ ಕರ್ನಲ್ ವಸಂತ್ ವೇಣುಗೋಪಾಲ್ ಅವರ ಪತ್ನಿ ಸುಭಾಷಿಣಿ ವಸಂತ್ ಹೇಳಿದ್ದಾರೆ.
ನಮ್ಮ ಭಾವನೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು, ವಿಧಾನ ಸೌಧದಿಂದ ಬೇರೇ ಬೇರೆ ಕಚೇರಿಗಳಿಗೆ ತೆರಳಿ ಅಂತಿಮವಾಗಿ  ಪರಿಹಾರ ಪಡೆಯು ನನಗೆ 7 ವರ್ಷಗಳು ಬೇಕಾಯಿತು. ನಮಗೆ ನೀಡಿರುವ ಭೂಮಿ ವಿವಾದದಲ್ಲಿದ್ದು ಕಾನೂನು ಹೋರಾಟ ನಡೆಸುತ್ತಿದ್ದೇವೆ, ಕರ್ನಲ್ ವಸಂತ್ ಬೆಂಗಳೂರಿನಿಂದ ಹುತಾತ್ಮರಾದ ಭಾರತೀಯ ಸೇನೆಯ ಹಿರಿಯ ಅಧಿಕಾರಿಯಾಗಿದ್ದಾರೆ, ಮರಾಟ ಲೈಟ್ ಇನ್ ಫ್ಯಾಂಟ್ರಿಯ 9ನೇ ಬೆಟಾಲಿಯನ್ ಅಧಿಕಾರಿಯಾಗಿದ್ದಾರೆ. 2007ರ ಜುಲೈ 31 ರಂದು ಪಾಕಿಸ್ತಾನ ಉಗ್ರರ ಜೊತೆ ಉತ್ತರ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಮಡಿದಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا