Urdu   /   English   /   Nawayathi

ಬೆಂಗಳೂರು; ಮೆದುಳು ನಿಷ್ಕ್ರಿಯಗೊಂಡಿದ್ದ ಯುವ ಆಟೋ ಚಾಲಕನ ಅಂಗಾಂಗ ದಾನ- 6 ಮಂದಿಗೆ ಮರುಜೀವ

share with us

ಬೆಂಗಳೂರು; 19 ಜುಲೈ (ಫಿಕ್ರೋಖಬರ್ ಸುದ್ದಿ) ಅಪಘಾತಕ್ಕೀಡಾಗಿ ಮಿದುಳು ನಿಷ್ಕ್ರಿಯಗೊಂಡ ಯುವ ಆಟೋ ಚಾಲಕನೊಬ್ಬನ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. 6 ಮಂದಿಗೆ ಮರು ಜೀವವನ್ನು ನೀಡಲಾಗಿದೆ. 23 ವರ್ಷದ ಆಟೋ ಚಾಲಕನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಜು.13 ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ಚಿಕಿತ್ಸೆ ನೀಡಲು ಮುಂದಾಗಿದ್ದ ವೈದ್ಯರು ಯುವಕನ ಮಿದುಳಿ ನಿಷ್ಕ್ರಿಯಗೊಂಡಿರುವುದಾಗಿ ಯುವಕನ ಪೋಷಕರಿಗೆ ತಿಳಿಸಿದ್ದರು. ಬಳಿಕ ಪೋಷಕರು ಯುವಕನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಇದರಂತೆ ಯುವಕನ ಎರಡು ಮೂತ್ರಪಿಂಡಗಳು, ಎರಡು ಶ್ವಾಸಕೋಶಗಳು, ಒಂದು ಯಕೃತ್ತು, ಒಂದು ಮೇದೋಜ್ಝೀರಕ ಗ್ರಂಥಿ, ಎರಡು, ಕಾರ್ನಿಯಾ, ಹೃದಯ ಕವಾಟುಗಳನ್ನು ದಾನ ಮಾಡಿದ್ದಾರೆ. 

ಯುವಕನ ಅಂಗಾಂಗಗಳನ್ನು ಬೆಂಗಳೂರು ನಗರದಲ್ಲಿರುವ ವಿವಿಧ ಆಸ್ಪತ್ರೆಗಳು ಹಾಗೂ ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ ರವಾನಿಸಲಾಗಿದೆ. ಮೂತ್ರಪಿಂಡ ವೈಫಲ್ಯದಿಂದ ಸಾವಿನ ಕೊನೆಯ ಕ್ಷಣೆಗಳನ್ನು ಎಣಿಸುತ್ತಿದ್ದ 62 ವರ್ಷದ ಮಹಿಳೆಯೊಬ್ಬರಿಗೆ ಯುವಕನ ಮೂತ್ರಪಿಂಡ ಹಾಗೂ ಯಕೃತ್ತನ್ನು ದಾನ ಮಾಡಲಾಗಿದೆ ಎಂದು ತಿಳಿದುಬಂದಿದೆ, 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا