Urdu   /   English   /   Nawayathi

ಬೆಂಗಳೂರು: ಸಾಲದ ಸುಳಿಯಿಂದ ಹೊರಬರಲು ಸರಗಳ್ಳತನಕ್ಕಿಳಿದ ಟೆಕ್ಕಿ!

share with us

ಬೆಂಗಳೂರು: 15 ಜುಲೈ (ಫಿಕ್ರೋಖಬರ್ ಸುದ್ದಿ) ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿಯೊಬ್ಬ ಅದರಿಂದ ಹೊರಬರುವ ಸಲುವಾಗಿ ಸರಗಳ್ಳತನಕ್ಕಿಳಿದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪರಪ್ಪನ ಅಗ್ರಹಾರ ನಿವಾಸಿಯಾಗಿರುವ ಪ್ರಭಾಕರ್ (42) ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗಷ್ಟೇ ಹೆಚ್ಎಸ್ಆರ್ ಲೇಔಟ್ ಸಮೀಪ ಸರಗಳ್ಳತನಕ್ಕೆ ಯತ್ನದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬೈಕ್ ಅಪಘಾತ ಮಾಡಿಕೊಂಡಿದ್ದ. ಬಳಿಕ ಚೇತರಿಸಿಕೊಂಡ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಭಾಕರ್ ಮೂಲತಃ ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿಯಾಗಿದ್ದು, 20 ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಪತ್ನಿ ಮತ್ತು ಇಬ್ಬರ ಮಕ್ಕಳೊಂದಿಗೆ ಪರಪ್ಪನ ಅಗ್ರಹಾರದಲ್ಲಿ ವಾಸವಾಗಿದ್ದ. ಮೊದಲು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಆತ, ಬಳಿಕ ಸ್ವಂತ ಸಾಫ್ಟ್'ವೇರ್ ಬೋರ್ಡ್ ಗಳನ್ನುಉತ್ಪಾದಿಸುವ ಕಂಪನಿ ಆರಂಭಿಸಿದ್ದ. ಈ ನಡುವೆ ಐಷಾರಾಮಿ ಜೀವನದ ಕಡೆಗೆ ಆಕರ್ಷಿತನಾಗಿದ್ದ ಪ್ರಭಾಕರ್, ಮೋಜು ಮಸ್ತಿ ಮಾಡಲು ಹಣಕಾಸು ಸಮಸ್ಯೆ ಎದುರಾಗಿತ್ತು. 

ಇತ್ತ ಸಾಫ್ಟ್'ವೇರ್ ಉದ್ಯಮದಲ್ಲಿಯೂ ಆತನಿಗೆ ನಿರೀಕ್ಷಿತ ಲಾಭ ಬರುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಆತ, ಸುಲಭವಾಗಿ ಹಣ ಸಂಪಾದಿಸಲು ಸರಗಳ್ಳತನಕ್ಕೆ ಇಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಕೆಲ ದಿನಗಳಿಂದ ಮುಂಜಾನೆ ಹೊತ್ತಿನಲ್ಲಿ ಹೆಚ್ಎಸ್ಆರ್ ಲೈಔಟ್, ಮಡಿವಾಳ ಹಾಗೂ ಜಯನಗರ ವ್ಯಾಪ್ತಿಯಲ್ಲಿ ಮಹಿಳೆಯರಿಂದ ಸರ ದೋಚಿದ್ದ ಪ್ರಭಾಕರ್ ಪರಾರಿಯಾಗಿದ್ದ. 

ಈ ಕೃತ್ಯಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಲವು ಕಡೆ ಆತನ ಚಲನವಲನದ ದೃಶ್ಯಾವಳಿಗಳು ಪತ್ತೆಯಾಗಿದ್ದವು. ಈ ಮಾಹಿತಿ ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆಗಿಳಿದಿದ್ದರು. ಜು.6 ರಂದು ಮುಂಜಾನೆ ಹೆಚ್ಎಸ್ಆರ್ ಲೈಔಟ್ ನಲ್ಲಿ ಆರೋಪಿ ಸರಗಳ್ಳತನಕ್ಕೆ ಬಂದಿದ್ದ. 

ಆ ವೇಳೆ ಗಸ್ತಿನಲ್ಲಿದ್ದ ಮುಖ್ಯ ಪೇದೆ ಮಾಳಪ್ಪ ಅವರಿಗೆ ಆತ ಎದುರಾಗಿತ್ತ. ಆಗ ಭಯದಿಂದ ತಪ್ಪಿಸಿಕೊಳ್ಳಲು ಯತ್ನ ನಡೆಸಿದ್ದ. ಇತ್ತ ಆತನ ನಡವಳಿಕೆಯಿಂದ ಅನುಮಾಗೊಂಡ ಪೊಲೀಸರು ಕೂಡಲೇ ಪ್ರಭಾಕರ್ ಬೆನ್ನು ಹತ್ತಿದ್ದಾರೆ. ಈ ಹಂತದಲ್ಲಿ ಆತಂಕದಿಂದ ಬೈಕ್ ಓಡಿಸುವಾಗ ಆತ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದದ್ದ. ಬಳಿಕ ಆತನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಪ್ರಭಾಕರ್'ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا