Urdu   /   English

ಎರಡು ಬೈಕಿನ ನಡುವೆ ಮುಖಾ ಮುಖಿ ಡಿಕ್ಕಿ

share with us

ಭಟ್ಕಳ: 12 ಜುಲೈ (ಫಿಕ್ರೋಖಬರ್ ಸುದ್ದಿ) ಇಂದು ಮಧ್ಯಾಹ್ನ ಸುಮಾರು 1:30ಕ್ಕೆ ತೆಂಗಿನಗುಂಡಿ ರಸ್ತೆಯ ಅತ್ತಾರ್ ಮೊಹಲ್ಲಾದ ಬಳಿ ಎರಡು ಬೈಕ್‍ಗಳ ನಡುವೆ ಮುಖಾ ಮುಖಿ ಡಿಕ್ಕಿ ನಡೆದ ಪರಿಣಾಮ ಎರಡೂ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ನಂತರ ತಕ್ಷಣ ಸ್ಥಳೀಯರು ಗಾಯಗೊಂಡವರನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಗಾಯಗೊಂಡವರು ಅಹ್ಮದ್ ಇಸ್ಮಾಯಿಲ್ ಬುಡ್ಡು(50) ಮತ್ತು ಶಿವಾನಂದ ನಾರಾಯಣ ಮೊಗೇರ್ ಎಂದು ಗುರುತಿಸಲಾಗಿದೆ. ಶಿವಾನಂದ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅವರನ್ನು ಪ್ರಥಮ ಚಿಕಿತ್ಸೆಯ ನಂತರ ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಲಾಯಿತು. ಇಸ್ಮಾಯಿಲ್ ಅವರನ್ನು ಕುಂದಾಪುರದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಪ್ರಕರಣ ಭಟ್ಕಳದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا