Urdu   /   English

ಬಾಳೇಗುಳಿಯ ಬಳಿ ನಡೆದ ಅಪಘಾತದಲ್ಲಿ ನಾಲ್ವರಿಗೆ ಗಾಯ

share with us

ಅಂಕೋಲಾ: 12 ಜುಲೈ (ಫಿಕ್ರೋಖಬರ್ ಸುದ್ದಿ) ಇಂದು ಬೆಳಿಗ್ಗೆ ತಾಲೂಕಿನ ಬಾಳೇಗುಳಿಯ ಬಳಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಉರುಳಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ನಾಲ್ಕು ಸ್ನೇಹಿತರು ಕೊಲ್ಕತ್ತಾದಿಂದ ಗೋವಾ ಕಡೆ ಪ್ರವಾಸಕ್ಕೆಂದು ಬಂದಿದ್ದು, ಗೋವಾದಲ್ಲಿ ಬಾಡಿಗೆ ಕಾರೊಂದು ಪಡೆದು ಗೋಕರ್ಣಕ್ಕೆ ತೆರಳಿ ಗೋವಾ ಕಡೆ ಮರಳಿ ಹೋಗುವಾಗ ಕಾರಿನ ನಿಯಂತ್ರಣ ತಪ್ಪಿ ಬಾಳೇಗುಳಿಯ ಬಳಿ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಗಾಯಗೊಂಡವರು ಶಿಲ್ಪಿ, ಹೈದ್ರಬಾದಿನ ಶಿಕಾ, ಒರಿಸ್ಸಾದ ನೀರಜ್ ಹಾಗೂ ಕೊಲ್ಕತ್ತಾದ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا