Urdu   /   English

ಹುಸೈನಬ್ಬ ಪ್ರಕರಣ: ಎಸ್ಸೈ ಸಹಿತ 9 ಮಂದಿ ನ್ಯಾಯಾಂಗ ಬಂಧನ ವಿಸ್ತರಣೆ

share with us

ಉಡುಪಿ: 12 ಜುಲೈ (ಫಿಕ್ರೋಖಬರ್ ಸುದ್ದಿ) ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ(62) ಕೊಲೆ ಪ್ರಕರಣದ ಆರೋಪಿಗಳಾದ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಸೇರಿದಂತೆ ಒಂಬತ್ತು ಮಂದಿಯ ನ್ಯಾಯಾಂಗ ಸೆರೆ ಅವಧಿಯನ್ನು ಜು.24ರ ವರೆಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ವಿಸ್ತರಿಸಿ ಆದೇಶ ನೀಡಿದೆ.

ಬಂಧಿತರ ನ್ಯಾಯಾಂಗ ಬಂಧನ ಅವಧಿ ಬುಧವಾರ ಮುಗಿದಿದ್ದ ಹಿನ್ನೆಲೆಯಲ್ಲಿ ವಿಡೀಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ಹದಿನಾಲ್ಕು ದಿನ ವಿಸ್ತರಿಸಿ ಆದೇಶ ನೀಡಲಾಗಿದೆ. ಈ ಸಂದರ್ಭ ಪ್ರಭಾರ ಸಹಾಯಕ ಅಭಿಯೋಜಕಿ ಜಯಂತಿ ಅವರು ಉಪಸ್ಥಿತರಿದ್ದರು.

ಪ್ರಕರಣದ ಒಟ್ಟು ಹನ್ನೊಂದು ಆರೋಪಿಗಳಲ್ಲಿ ಹಿರಿಯಡ್ಕ ಠಾಣೆಯ ಎಚ್.ಸಿ ಮೋಹನ್ ಕೋತ್ವಾಲ್, ಬಜರಂಗಿ ಮುಖಂಡ ಪ್ರಸಾದ್ ಕೊಂಡಾಡಿಗೆ ಜೂ. 18ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಹುಸೇನಬ್ಬ ಅವರಿಗೆ ಮನೆಯ ದನ ಮಾರಾಟ ಮಾಡಿದ ಬಳಿಕ ಬಜರಂಗದಳಕ್ಕೆ ಮಾಹಿತಿ ನೀಡಿದ್ದ  ಮಂಗಳೂರು ಜೈಲಿನಲ್ಲಿರುವ ಆರೋಪಿ ದೀಪಕ್ ಹೆಗ್ಡೆಯ ಜಾಮೀನು ಅರ್ಜಿಗೆ ಸಂಬಂಧಿಸಿ ಆರೋಪಿಯ ವಕೀಲ ಅರುಣ್ ಬಂಗೇರ ಇಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ವಾದಿಸಿದರು. 

ಜು.13ರಂದು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿಯವರಿಗೆ ಪ್ರತಿವಾದಕ್ಕೆ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಆದೇಶ ನೀಡಿದ್ದಾರೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا