Urdu   /   English   /   Nawayathi

ಕೀನ್ಯಾದಲ್ಲಿ ಕೊಪ್ಪಳ ಜಿಪಂ ಸಿಇಒ ಶೌಚ ಕ್ರಾಂತಿ ಪಾಠ

share with us

ಕೊಪ್ಪಳ: 07 ಜುಲೈ (ಫಿಕ್ರೋಖಬರ್ ಸುದ್ದಿ) ಶೌಚಾಲಯ ನಿರ್ಮಾಣದಲ್ಲಿ ರಾಷ್ಟ್ರಮಟ್ಟದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದ ಕೊಪ್ಪಳ ಜಿಲ್ಲಾ ಪಂಚಾಯತ್‌ ಸಿಇಒ ವೆಂಕಟ ರಾಜಾ ಅವರು ಜು.9ರಿಂದ ಕೀನ್ಯಾ ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಉಪನ್ಯಾಸ ನೀಡಲು ಭಾರತ ಸರ್ಕಾರದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಶೌಚಾಲಯ ನಿರ್ಮಾಣಕ್ಕಾಗಿ ಉಪವಾಸ ಕುಳಿತಿದ್ದ ಡಣಾಪುರದ ಮಲ್ಲಮ್ಮ ಸೇರಿ ನೂರಾರು ವಿದ್ಯಾರ್ಥಿಗಳ ಪತ್ರ ಚಳವಳಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಮಲ್ಲಮ್ಮನಲ್ಲಿನ ಜಾಗೃತಿಯ ಮನೋಭಾವ ಅರಿತ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಮನ್‌ ಕಿ ಬಾತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಇದರ ಜತೆಗೆ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಜಿಪಂ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದೆ.
ವಿವಿಧ ಪ್ರಯೋಗ ನಡೆಸಿ ಜನರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಯಶಸ್ವಿ ಕಥೆ ಕುರಿತು ಸ್ವಚ್ಛ ಭಾರತ್‌ ಮಿಷನ್‌ ಹಾಗೂ ಯುನೆಸೆಫ್‌ ಸಹಯೋಗದಲ್ಲಿ ನಡೆಯುವ ರಾಷ್ಟ್ರಮಟ್ಟದ
ಸಮ್ಮೇಳನದಲ್ಲಿ ಕೊಪ್ಪಳ ಜಿಪಂ ಸಿಇಒ ವೆಂಕಟರಾಜಾ ಅವರು ವಿಷಯ ಮಂಡಿಸಲಿದ್ದಾರೆ. ಹಿಂದುಳಿದ ಜಿಲ್ಲೆಯಲ್ಲಿನ ಯಶೋಗಾಥೆ ಅಂಶಗಳನ್ನು ಗಮನಿಸಿದ ಯುನೆಸೆಫ್‌, ವೆಂಕಟರಾಜಾ ಅವರನ್ನು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆ ಮಾಡಿದೆ.

ಕಿನ್ಯಾ ದೇಶದಲ್ಲಿ ನಡೆಯುವ ಸಮ್ಮೇಳನ: ಯು.ಕೆ. ಲೋಗೋಬ್ರೋ ವಿಶ್ವವಿದ್ಯಾಲಯ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸುತ್ತದೆ. ಈ ಬಾರಿ 41ನೇ ಸಮ್ಮೇಳನ ಇದಾಗಿದ್ದು, ಜು.9ರಿಂದ 13ರವರೆಗೆ 5 ದಿನಗಳ ಕಾಲ ಕಿನ್ಯಾ ದೇಶದ ನಾಕೂರು ಪ್ರದೇಶದ ಎಗರಟನ್‌ ವಿವಿಯಲ್ಲಿ ನಡೆಸಲು ಉದ್ದೇಶಿಸಿದೆ.

ಸುಮಾರು 40 ದೇಶಗಳಿಂದ 400 ವಿವಿಧ ತಜ್ಞರು, ವಿಷಯ ಪರಿಣತರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಹಿಂದುಳಿದ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಆಡಳಿತ ವರ್ಗವು ಸಾರ್ವಜನಿಕರೊಂದಿಗೆ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಹೇಗೆ ಜಾಗೃತಿ ಮೂಡಿಸಿದೆ. ಹಿಂದುಳಿದ ಜಿಲ್ಲೆಯಲ್ಲಿ ಏನು ಸಮಸ್ಯೆ ಇದ್ದವು ಎನ್ನುವ ಕುರಿತು ಸಿಇಒ ವೆಂಕಟರಾಜಾ ಸಮ್ಮೇಳನದಲ್ಲಿ ವಿವರಿಸಲಿದ್ದಾರೆ.

ದೇಶದ ಏಕೈಕ ಪ್ರತಿನಿಧಿ: ಅಭಿವೃದಿಟಛಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಸೇರಿ ಆರೋಗ್ಯದ ಬಗ್ಗೆ ಜಾಗೃತಿ, ಯಶಸ್ವಿಯ ಕುರಿತು ವಿಶ್ವಮಟ್ಟದ ವಿವಿಧ ಸಂಸ್ಥೆಗಳು ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್‌ ಹಾಗೂ ಯೂನೆಸೆಫ್‌ನಿಂದ ಫೆಬ್ರವರಿಯಲ್ಲಿ ನಡೆದಿದ್ದ ಸಮ್ಮೇಳನದಲ್ಲಿ ವೆಂಕಟರಾಜಾ ವಿವರಣೆ ಮಂಡಿಸಿದ್ದರು. ಹಾಗಾಗಿ ಕೊಪ್ಪಳ ಜಿಲ್ಲೆ ಹಿಂದುಳಿದಿದ್ದು, ಅಲ್ಲಿನ ಯಶೋಗಾಥೆಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಏಕೈಕ ಪ್ರತಿನಿಧಿಯಾಗಿ ಅವರನ್ನು ಉಪನ್ಯಾಸ ನೀಡಲು ಆಯ್ಕೆ ಮಾಡಿದೆ.

ಕೀನ್ಯಾ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಸಮ್ಮೇಳನನಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಉಪನ್ಯಾಸ ನೀಡಲು ತೆರಳುತ್ತಿದ್ದೇನೆ. ಜು.9ರಿಂದ 13ರವರೆಗೆ ಸಮ್ಮೇಳನ ನಡೆಯಲಿದ್ದು, ವಿವಿಧ ದೇಶಗಳ ಜನರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ನಮ್ಮ ಜಿಲ್ಲೆಯಲ್ಲಿನ ಯಶೋಗಾಥೆ ಹಾಗೂ ಸಮಸ್ಯೆಗಳ ಕುರಿತು ವಿವರಣೆ ನೀಡಲಿದ್ದೇನೆ.
- ವೆಂಕಟರಾಜಾ, ಕೊಪ್ಪಳ ಜಿಪಂ ಸಿಇಒ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا