Urdu   /   English

ಕ್ಷುದ್ರ ಗ್ರಹದಲ್ಲಿ ಜೀವ ಉಗಮದ ಹುಡುಕಾಟ

share with us

ಭೂಮಿಯ ಮೇಲಿನ ಜೀವ ವಿಕಸನದ ಮೂಲದ ಹುಡುಕಾಟಕ್ಕೆ ಹೊರಟ್ಟಿದ್ದ ಜಪಾನಿನ ಹಯಾಬುಸಾ-2 ಬಾಹ್ಯಾಕಾಶ ನೌಕೆ ಈಗ ತನ್ನ ಗುರಿಯ ತಾಣವಾದ ಕ್ಷುದ್ರ ಗ್ರಹವನ್ನು ತಲುಪಿದೆ. 300 ದಶಲಕ್ಷ ಕಿ.ಮೀ ದೂರದಲ್ಲಿರುವ ರೈಗು ಹೆಸರಿನ ಈ ಕ್ಷುದ್ರಗ್ರಹವನ್ನು ಶೋಧನಾ ನೌಕೆ ಬಾಹ್ಯಾಕಾಶದಲ್ಲಿ 3 ವರ್ಷಗಳ ಕಾಲ ಯಾನ ಮಾಡಿ ಈಗ ತಲುಪಿದೆ ಎಂದು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಾಕ್ಸಾ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಭೂಮಿಯ ಮೇಲಿನ ಜೀವ ವಿಕಸನದ ಮೂಲವನ್ನು ಪತ್ತೆ ಹಚ್ಚಲು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಯಾಬುಸಾ-2 ಬಾಹ್ಯಾಕಾಶ ನೌಕೆಯನ್ನು ರೈಗು ಹೆಸರಿನ ಕ್ಷುದ್ರಗ್ರಹವನ್ನು ತಲುಪಿದೆ.

ಹೆಚ್ಚಿನ ಜೈವಿಕ ಮತ್ತು ನೀರಿನಿಂದ ಕೂಡಿರುವ ಈ ಕ್ಷುದ್ರಗ್ರಹದಲ್ಲಿಯ ಮಾದರಿಗಳ ಪರೀಕ್ಷೆಗಳಿಂದ ಭೂಮಿಯ ಮೇಲಿನ ಜೀವವಿಕಸನದ ಮೂಲ ಕುರಿತಂತೆ ಹೆಚ್ಚಿನ ಮಾಹಿತಿ ಸಿಗಬಹುದು ಎಂಬುದು ಈ ಯಾನದ ಉದ್ದೇಶವಾಗಿದೆ. ಈಗ ಈ ಯಾನವನ್ನು ತಲುಪಿರುವ ಹಯಾಬುಸಾ-2 ಬಾಹ್ಯಾಕಾಶ ನೌಕೆ 18 ತಿಂಗಳ ಕಾಲ ಆ ಗ್ರಹದಲ್ಲಿದ್ದು, ಮಾದರಿಗಳನ್ನು ಸಂಗ್ರಹಿಸಿದ 2020ರಲ್ಲಿ ಭೂಮಿಗೆ ಮರುಳಲಿದೆ ಎಂದು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಾಕ್ಸಾ ಹೇಳಿದೆ.

ಹಯಾಬುಸಾ-2 ಶೋಧನಾ ನೌಕೆ ರೈಗು ಕ್ಷುದ್ರ ಗ್ರಹದ ಮೇಲೆ 20 ಕಿ.ಮೀ ಎತ್ತರದಲ್ಲಿ ಸೂಕ್ತ ವೀಕ್ಷಣಾ ಸ್ಥಳದಲ್ಲಿ ನೆಲೆಯೂರಿದ್ದು, ಮುಂದಿನ ತಿಂಗಳುಗಳಲ್ಲಿ ಇದು ರೈಗು ಕ್ಷುದ್ರಗ್ರಹದ ಮೇಲೆ ಇಳಿದು ಅಲ್ಲಿಯ ಮಾದರಿಗಳನ್ನು ಸಂಗ್ರಹಿಸಲಿದೆ ಎಂದೂ ಜಪಾನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ರೈಗೂ ಕ್ಷುದ್ರಗ್ರಹ ಬೇರೆ ಗ್ರಹಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಪದಾರ್ಥಗಳನ್ನು ಮತ್ತು ನೀರನ್ನು ಹೊಂದಿದೆ. ಇಲ್ಲಿರುವ ಜೈವಿಕ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳ ವಿಶ್ಲೇಷಣೆಯಿಂದ ಭೂಮಿಯ ಮೇಲಿನ ಜೀವ ವಿಕಸನ ಕುರಿತ ಸುಳಿವು ಪಡೆಯುವುದು ಈ ಶೋಧನೆಯ ಮುಖ್ಯ ಉದ್ದೇಶವಾಗಿದೆ.

ರೈಗೂ ಎಂದರೆ ಜಪಾನ್ ಭಾಷೆಯಲ್ಲಿ ಡ್ರ್ಯಾಗನ್ ಪ್ಯಾಲೇಸ್ ಎಂದು. ಸಾಗರ ತಳದಲ್ಲಿರುವ ಡ್ರ್ಯಾಗನ್ ಅರಮನೆ ಕುರಿತಂತೆ ಪುರಾತನ ಜಪಾನ್‌ಗಳ ಕತೆಗಳಲ್ಲಿ ಬರುತ್ತದೆ. ಹಯಾಬುಸಾ-2 ದೊಡ್ಡ ಫ್ರಿಡ್ಜ್ ಗಾತ್ರದ್ದಾಗಿದ್ದು, ಇದನ್ನು ಸೋಲಾರ್ ಪ್ಯಾಲೇಸ್ ಇತರೆ ಮಾಹಿತಿ ಸಂಗ್ರಹ ಸಂಕೀರ್ಣ ತಂತ್ರಜ್ಞಾನದಿಂದ ಸಜ್ಜುಗೊಳಿಸಲಾಗಿದೆ.

ಈ ಯಾನದ ವೆಚ್ಚ 30 ಶತಕೋಟಿ ಯೆನ್ (274 ದಶಲಕ್ಷ ಡಾಲರ್)ಆಗಿದ್ದು, ಈ ಯಾನದ ಬಾಹ್ಯಾಕಾಶ ನೌಕೆಯನ್ನು ಡಿಸೆಂಬರ್ 2014ರಲ್ಲಿ ಉಡಾವಣೆ ಮಾ‌ಡಲಾಗಿತ್ತು. ಕ್ಷುದ್ರಗ್ರಹದಲ್ಲಿ 18 ತಿಂಗಳು ಇರಲಿರುವ ಈ ಬಾಹ್ಯಾಕಾಶ ನೌಕೆ ಅದರಲ್ಲಿಯ ಮಾದರಿಗಳನ್ನು ಹೊತ್ತು 2020ಕ್ಕೆ ಭೂಮಿಗೆ ಮರುಳಲಿದೆ.

ಜೂ. 30 ವಿಶ್ವ ಕ್ಷುದ್ರಗ್ರಹಗಳ ದಿನಾಚರಣೆ ಆಚರಿಸಲಾಗುತ್ತಿದೆ. ಇದಕ್ಕೆ ಒಂದೆರೆಡು ದಿನಗಳ ಮುಂಚೆ ಜಪಾನ್ ಬಾಹ್ಯಾಕಾಶ ಸಂಸ್ಥೆಯ ಶೋಧನಾಯಾನದ ಹೇಳಿಕೆ ಹೊರ ಬಿದ್ದಿದೆ. ಕ್ಷುದ್ರಗ್ರಹಗಳಿಂದ ಭೂಮಿಯ ಮೇಲಿನ ಜೀವಿಗಳಿಗೆ ಹೆಚ್ಚಿನ  ಹಾನಿಯಾಗುವುದು ಎಂಬುದು ಜನರ ಕಲ್ಪನೆಯಾಗಿದ್ದು,. ಹೀಗಾಗಿ, ಕ್ಷುದ್ರ ಗ್ರಹಗಳ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ಕ್ಷುದ್ರಗ್ರಹಗಳ ವರ್ಷಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಕ್ಷುದ್ರಗ್ರಹಗಳ ಕುರಿತಂತೆ ಮಾಹಿತಿ, ವೀಕ್ಷಣೆ ಮತ್ತು ಹೆಚ್ಚಿನ ಅರಿವನ್ನು ಮೂಡಿಸಲಾಗುತ್ತದೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا