Urdu   /   English   /   Nawayathi

ನನಗೇ ಕಿರುಕುಳ ಏಕೆಂದು ಗೊತ್ತು-ಡಿ.ಕೆ. ಶಿವಕುಮಾರ್

share with us

ಬೆಂಗಳೂರು: 20 ಜೂನ್ (ಫಿಕ್ರೋಖಬರ್ ಸುದ್ದಿ) ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಗೆ ಕಿರುಕುಳ ಕೊಡುತ್ತಿರುವುದು ಏಕೆ ಎಂದು ಗೊತ್ತಿದೆ. ಈಗ ನಾನು ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ.ಎಲ್ಲವನ್ನೂ ಕಾನೂನು ಮೂಲಕವೇ ಎದರಿಸುತ್ತನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಆದಾಯ ತೆರಿಗೆ ಇಲಾಖೆಯ ದಾಳಿ, ನೋಟಿಸ್ ಇವುಗಳ ಬಗ್ಗೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಅವರು, ನನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಂಬಂಧಿಕರು, ಆಪ್ತರಿಗೂ ಕಿರುಕುಳ ಕೊಡಲಾಗುತ್ತಿದೆ ಎಂದು ಹರಿಹಾಯ್ದರು.
ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಬೇರೆಯವರ ಮನೆಯಲ್ಲಿ ಡೈರಿ ಲೆಕ್ಕ ಇಟ್ಟಿದ್ದು, ಗೊತ್ತಿಲ್ಲವೆ. ಅಂತಹವರ ಮೇಲೆ ಏಕೆ ದಾಳಿ ಮಾಡಿಲ್ಲ ಎಂದು ಅವರು ಪರೋಕ್ಷವಾಗಿ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿ ಪ್ರಕರಣವನ್ನು ಪ್ರಸ್ತಾಪಿಸಿದರು.
ಐಟಿ ಇಲಾಖೆಯಿಂದ ಯಾವುದೇ ಸಮನ್ಸ್ ಬಂದಿಲ್ಲ. ಆದರೆ ವಿಚಾರಣೆಗೆ ಹಾಜರಾಗುವಂತೆ ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ನೋಟಿಸ್ ಬಂದಿದೆ ಎಂದು ಹೇಳಿದರು.
ಯಾರಿಗೇ ಏನು ಅನಿಸುತ್ತದೋ ಅದನ್ನು ಮಾಡಲಿ. ಮಾಧ್ಯಮವದರು ಏನನ್ನೂ ಬೇಕಾದರೂ ಮಾಡಿಕೊಳ್ಳಲಿ. ಕೊನೆಗೆ ಕಾನೂನು ಇದೆ. ಕಾನೂನಿನ ಮೂಲಕ ಹೋರಾಟ ಮಾಡುವುದು ಗೊತ್ತಿದೆ ಎಂದು ಸ್ವಲ್ಪ ಗರಂ ಆಗಿ ಹೇಳಿದರು.
ಆದಾಯ ತೆರಿಗೆ ಇಲಾಖೆ ಕಿರುಕುಳದ ಬಗ್ಗೆ ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತನೆ ಎಂದು ಅವರು ಸಿಟ್ಟಿನಿಂದ ನುಡಿದರು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا