Urdu   /   English   /   Nawayathi

ರಾಜ್ಯದ ರೈತರೊಂದಿಗೆ ಕನ್ನಡದಲ್ಲಿ ಮಾತನಾಡಿದ ಮೋದಿ

share with us

ನವದೆಹಲಿ: 20 ಜೂನ್ (ಫಿಕ್ರೋಖಬರ್ ಸುದ್ದಿ) ಕಮಲಮ್ಮ ನೀವು ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಕ್ಷೇಮವಾಗಿದ್ದೀರಾ? ನಮೋ ಆ್ಯಪ್ ಲೈವ್ ವಿಡಿಯೊ ಮೂಲಕ ಕರ್ನಾಟಕದ ರೈತರೊಂದಿಗೆ ಸಂವಾದ ನಡೆಸಿದ ನರೇಂದ್ರ ಮೋದಿ ಕನ್ನಡ ಮಾತನಾಡಿದಾಗ ರೈತರ ಮುಖದಲ್ಲಿ ಖುಷಿಯ ಅಲೆ.

ರಾಮನಗರ ಜಿಲ್ಲೆಯ ಕರ್ನಾಟಕ ಕೃಷಿ ವಿಕಾಸ ಕೇಂದ್ರದಲ್ಲಿ ಕುಳಿತು ರೈತರು ಮೋದಿ ಜತೆ ಲೈವ್ ವಿಡಿಯೊ ಸಂವಾದ ನಡೆಸಿದ್ದಾರೆ. 

ಕಮಲಮ್ಮ ಎಂಬ ರೈತ ಮಹಿಳೆ ಮೋದಿ ಜತೆ ಮಾತು ಆರಂಭಿಸಿದಾಗ, ಮೋದಿ ಕನ್ನಡದಲ್ಲಿ ಮಾತನಾಡಿದ್ದಾರೆ. ರೈತರು ಕನ್ನಡದಲ್ಲಿ ಮಾತನಾಡಿದ್ದನ್ನು ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಹಿಂದಿಯಲ್ಲಿ ಅನುವಾದ ಮಾಡುತ್ತಿದ್ದರು.

ಇನ್ನೊಬ್ಬ ರೈತ ಮಾತನಾಡಿದಾಗ, ನೀವು ಹೇಗಿದ್ದೀರಾ? ನಿಮ್ಮ ಕೃಷಿ ಕೆಲಸಗಳು ಹೇಗಿವೆ? ಎಂದು ಕೇಳಿದ್ದಾರೆ ಮೋದಿ.

ಕರ್ನಾಟಕ ವಿಧಾನಸಭಾ  ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಮೋದಿ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸುತ್ತಿದ್ದರು.  ಹುಬ್ಬಳ್ಳಿಯಲ್ಲಿ  ನಡೆದ ಪ್ರಚಾರ ಸಭೆಯಲ್ಲಿ ವರಕವಿ ಬೇಂದ್ರೆಯವರನ್ನು ವಾರಕವಿ ಬೇಂದ್ರೆ ಎಂದು ಹೇಳಿ, ಕುರುಡು ಕಾಂಚಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು...’ಕವನವನ್ನು ಪ್ರಯಾಸದಿಂದ ವಾಚಿಸಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

https://youtu.be/hMAFtlsQzzw

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا